ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಎಲ್ಲ ತರುವಾ ಯದ(ನಂತರದ)ವಿಮಾ ಪ್ರಸ್ತಾವನೆಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು.ಈ ನಿಯಮ ಏ.1ರಿಂದ ಅನ್ವಯವಾಗಿದೆ.ಆಫ್‌ಲೈನ್ ಮೂಲಕ ಸಲ್ಲಿಸುವ ಪ್ರಸ್ತಾವನೆ ತಿರಸ್ಕರಿಸುವಂತೆ ವಿಮಾ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ. ಕರ್ನಾಟಕ ಸರ್ಕಾರಿ, ವಿಮಾ ಇಲಾಖೆ ಹೊಸ ವಿಮಾ ವ್ಯವಹಾರ ಶಾಖೆಯ ಪ್ರಥಮ ವಿಮಾ ಪ್ರಸ್ತಾವನೆಗಳನ್ನು ಕೂಡ ಆನ್‌ಲೈನ್ ಮೂಲಕವೇ ಸ್ವೀಕರಿಸುವ ಮಾದರಿಯು ಈಗಾಗಲೆ ಚಾಲ್ತಿಯಲ್ಲಿದೆ. ಈಗಾಗಲೆ ಮಾ.14 ರಿಂದ ಚಿಕ್ಕಮಗಳೂರು,ಶಿವಮೊಗ್ಗ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತರುವಾ ಯದ ವಿಮಾ ಪ್ರಸ್ತಾವನೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಕುರಿತು ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದ್ದು ಯಶಸ್ವಿಯಾಗಿದೆ.
ಹೀಗಾಗಿ, ಉಳಿದ 26 ಜಿಲ್ಲಾ ವಿಮಾ ಕಚೇರಿಗಳಿಗೂ ಸದರಿ ತಂತ್ರಾಂಶವನ್ನು ವಿಸ್ತರಿಸಲಾಗಿದೆ.ಮಾ.31ರೊಳಗೆ ಸ್ವೀಕೃತವಾದ ಎಲ್ಲ ತರುವಾಯದ ಆಫ್‌ಲೈನ್ ವಿಮಾ ಪ್ರಸ್ತಾವನೆಗಳನ್ನು ಜಿಲ್ಲಾ ವಿಮಾ ಅಧಿಕಾರಿಗಳ ವ್ಯಾಪ್ತಿಗೊ ಳಪಟ್ಟಿದ್ದರೆ ಪರಿಶೀಲಿಸಿ ಅಂಗೀಕರಿಸಬೇಕು.ಒಂದು ವೇಳೆ ಆಫ್ ಲೈನ್ ಪ್ರಸ್ತಾವನೆಗಳು ಉಪ ನಿರ್ದೇಶಕರು,ನಿರ್ದೇ ಶಕರ ಹಂತದಲ್ಲಿ ಇತ್ಯರ್ಥವಾಗಬೇಕಿದ್ದರೆ ಅವುಗಳನ್ನು ಕೇಂದ್ರ ಕಚೇರಿಗೆ ರವಾನಿಸಬೇಕು.ಇನ್ನು ಏ.1ರ ನಂತರ ಕಡ್ಡಾಯವಾಗಿ ಆಫ್‌ಲೈನ್ ತರುವಾಯದ ವಿಮಾ ಪ್ರಸ್ತಾವ ನೆಗಳನ್ನು ನಿಲ್ಲಿಸಿ,ಆನ್‌ಲೈನ್ ಮೂಲಕ ಸ್ವೀಕರಿಸಬೇಕು ಎಂದು ಜಿಲ್ಲಾ ವಿಮಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ,ಜಿಲ್ಲಾವ್ಯಾಪ್ತಿಯಲ್ಲಿ ಎಲ್ಲ ವೇತನ ಬಟವಾಡೆ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸುವಂತೆ ಅದೇಶಿಸಿದ್ದಾರೆ.