ಬೆಂಗಳೂರು –
ವಿವಿಧ ಭತ್ಯೆಗಳ ಮರು ಪಾವತಿ’ ಕುರಿತು ಸರ್ಕಾರದಿಂದ ಮಹತ್ವದ ಆದೇಶವಾಗಿದೆ ಹೌದು
ರಾಜ್ಯ ಸರ್ಕಾರಿ ನೌಕರರಿಗೆ ತಪ್ಪಾಗಿ, ಹೆಚ್ಚುವರಿ ಯಾಗಿ,ಕಡಿಮೆಯಾಗಿ ಪಾವತಿಸಲಾದ ವಿವಿಧ ಭತ್ಯೆಗಳನ್ನು ಸರಿಪಡಿಸಿ ಮರುಪಾವತಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ(1) ರ ಆದೇಶದಂತೆ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಗಳನ್ನು 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1) ರ ಆದೇಶದಂತೆ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ/ಹುದ್ದೆಗಳಿಗೆ ಲಭ್ಯ ವಿದ್ದ ವಿಶೇಷ ಭತ್ಯೆಗಳನ್ನು 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ವಿಶೇಷ ಭತ್ಯೆ ಮಂಜೂರಾತಿ ಕುರಿತಂತೆ ಹೊರಡಿ ಸಲಾದ ಹಿಂದಿನ ಎಲ್ಲಾ ಆದೇಶಗಳು ದಿನಾಂಕ: 01.01.2019 ರಿಂದ ಜಾರಿಗೆ ಬರುವಂತೆ ನಿರಸ ಗೊಳ್ಳುತ್ತದೆ. ಶೀಘ್ರಲಿಪಿಗಾರರು, ಹಿರಿಯ ಶೀಘ್ರ ಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರು ಇವರುಗಳನ್ನು ಹೊರತುಪಡಿಸಿ
ಬೇರೆ ಯಾವುದೇ ಸರ್ಕಾರಿ ನೌಕರರು ಒಂದಕ್ಕಿಂತ ಹೆಚ್ಚಿನ ವಿಶೇಷ ಭತ್ಯೆಗೆ ಅರ್ಹರಾಗತಕ್ಕದ್ದಲ್ಲ. ವರಂತು ಸಚಿವರು,ಸರ್ಕಾರದ ಕಾರ್ಯದರ್ಶಿಗಳ ವೈಯಕ್ತಿಕ ಶಾಖೆಗೆ ನಿಯುಕ್ತಿಗೊಳಿಸಲಾಗಿರುವ ಶೀಘ್ರಲಿಪಿಗಾರರು, ಹಿರಿಯ ಶೀಘ್ರಲಿಪಿಗಾರರು ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾ ರರು
ಹಿರಿಯ ಬೆರಳಚ್ಚುಗಾರರು ವೈಯಕ್ತಿಕ ಶಾಖೆಗೆ ಲಭ್ಯವಿರುವ ವಿಶೇಷ ಭತ್ಯೆಯ ಜೊತೆಗೆ ಅವರು ಹೊಂದಿರುವ ಹುದ್ದೆಗಳಿಗೆ ಲಭ್ಯವಿರುವ ವಿಶೇಷ ಭತ್ಯೆಯನ್ನು ನೀಡಬಹುದಾಗಿದೆ.
ಹೆಚ್‌ಆರ್‌ಎಂಎಸ್ 2.0 ನ Arrears Module Database ಅನ್ನು ನಿರ್ವಹಿಸುವ ಸಂದರ್ಭದಲ್ಲಿ ನೌಕರರು ಪಡೆಯುತ್ತಿರುವ ಭತ್ಯೆಗಳ ವಿವರಗ ಳನ್ನು ವಿಶ್ಲೇಷಿಸಿದಾಗ ಕೆಳಕಂಡ ಅಂಶಗಳು ಕಂಡು ಬಂದಿರುತ್ತದೆ.ಆದ್ದರಿಂದ, ಇಲಾಖಾ ಹಂತದಲ್ಲಿ ತುರ್ತಾಗಿ ಸಳೆಯಲಾಗುತ್ತಿರುವ ಭತ್ಯೆಗಳನ್ನು ಪರಿಶೀಲಿಸಿ,
ಇಲಾಖಾವಾರು ಪ್ರತ್ಯೇಕವಾಗಿ ಯಾವುದಾದರೂ ಭತ್ಯೆಗಳ ಸಂಬಂಧ ಆದೇಶ ಹೊರಡಿಸಿದ್ದರೆ, ಹೆಚ್‌ಆರ್.ಎಂಎಸ್ 2.0 ತಂತ್ರಾಂಶದಲ್ಲಿ ಅಳವ ಡಿಸಲು ಆದೇಶ ಪತಿಗಳನ್ನು ಸಲ್ಲಿಸುವುದು. ಅನ್ವಯಿಸದಿರುವ ಭತ್ಯೆಗಳನ್ನು ನಿಲ್ಲಿಸುವುದು, ಭತ್ಯೆಗಳ ವರ್ಗೀಕರಣ ಸರಿಪಡಿಸುವುದು, ಹೆಚ್ಚಿನ ದರದಲ್ಲಿ ಸಳೆದಿರುವ ಭತ್ಯೆಗಳನ್ನು ವೇತನದಲ್ಲಿ ಕಟಾಯಿಸಿ ಸರ್ಕಾರಕ್ಕೆ ಮರುಭರಿಸುವುದು ಇದು ಅತಿ ಅವಶ್ಯವಾಗಿದೆ.
ಶೀಘ್ರದಲ್ಲೆ 02.0 Payroll module ನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ತಿಂಗಳ ವೇತನವನ್ನು 10 ಪೈಲಟ್ ಇಲಾಖೆಗಳನ್ನು ಹೆಚ್‌ಆರ್‌ಎಂಎಸ್ 2.0 ನಲ್ಲೆ ತಯಾರಿಸಿ, ಖಜಾನೆ-2 ಗೆ ಸಲ್ಲಿಸಲಾಗುತ್ತಿದೆ. ಮುಂದುವ ರೆದು, ಇನ್ನು ಮುಂದಿನ ತಿಂಗಳುಗಳಲ್ಲಿ ಎಲ್ಲಾ ಇಲಾಖೆಗಳು ಹೆಚ್‌ಅರ್‌ಎಂಎಸ್ 2.0 ನಲ್ಲಿ ವೇತನ ಸೆಳೆಯುವುದರಿಂದ,
ಯಾವುದೇ ಆಧಾರವಿಲ್ಲದ ಭತ್ಯೆಗಳನ್ನು ಸೆಳೆಯಲು ಹೆಚ್‌ರ್‌ಎಂಎಸ್ 2.0 ಬಿಡುವುದಿಲ್ಲ. ಆದುದರಿಂದ ಈ ಪತ್ರದಲ್ಲಿ ತಿಳಿಸಿರುವಂತೆ ಎಲ್ಲಾ, ಡಿಡಿಓ ಗಳಿಗೆ ತಮ್ಮ ಅಧೀನದ ಸಿಬ್ಬಂದಿಗಳ ಭತ್ಯೆ ಗಳನ್ನು ಜರೂರಾಗಿ ಪರಿಶೀಲಿಸಿ, ಹೆಚ್‌ಆರ್ ಎಂಎಸ್ 2.0 ನಲ್ಲಿ ಸೇರಿಸಲು ಸೂಕ್ತ ಮಾಹಿತಿ ಯೊಡನೆ ಸಲ್ಲಿಸಲು ತಿಳಿಸಿದೆ.
ಯಾವುದೇ ವಿಶೇಷ ಭತ್ಯೆಗಳು ಆಧಾರವಿಲ್ಲದ ಲಭ್ಯಪಡಿಸಲಾಗುವುದಿಲ್ಲಾ, ಎಂದು ಈ ಮೂಲಕ ತಿಳಿಸಿ ಸೂಕ್ತ ನಿರ್ದೇಶನವನ್ನು ತಮ್ಮ ಎಲ್ಲಾ ಡಿಡಿಓ ಗಳಿಗೆ ನೀಡಲು ಕೋರಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……