ಬೆಂಗಳೂರು –
ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ನವೆಂಬರ್ 14 ರಂದು ರಾಜ್ಯದ ಎಲ್ಲಾ ಸರ್ಕಾರ ಶಾಲೆಗಳಲ್ಲಿ ಪೋಷಕ-ಶಿಕ್ಷಕರ ಸಭೆ ಕಡ್ಡಾಯ ಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿ ಸಿದಂತೆ, 2025-26ನೇ ಸಾಲಿನಲ್ಲಿ AWP&B ಯಲ್ಲಿ ಪ್ರಾಥಮಿಕ ಶಾಲೆ-41,506 ಹಾಗೂ ಪ್ರೌಢಶಾಲೆ-5,360 ಒಟ್ಟು 46,866 ಶಾಲೆಗಳಲ್ಲಿ ಪೋಷಕರ ಸಭೆ ನಡೆಸಲು ಹಾಗೂ ದಾಖಲೀಕರಣಕ್ಕಾಗಿ ಪ್ರತಿ ಶಾಲೆಗೆ ರೂ.1500/-ರಂತೆ ಒಟ್ಟು ರೂ.702.99 ಲಕ್ಷಗಳು ಅನುದಾನ ಅನುಮೋದನೆಯಾಗಿರುತ್ತದೆ.
ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳಲ್ಲಿ ದಿನಾಂಕ: 14.11.2025 ರಂದು ಏಕಾಲದಲ್ಲಿ ಮೆಗಾ ಪೋಷಕರ ಸಭೆಯನ್ನು ನಡೆಸಲು ರೂ.1500/- ಗಳನ್ನು ಬಿಡುಗಡೆ ಮಾಡಲಾಗಿದೆ.ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪೋಷಕರಿಗೆ 2025-26 ಸಾಲಿನಲ್ಲಿ ಸಭೆಗಳನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ. (ಪ್ರಾಥಮಿಕ ಶಾಲೆ- 41,506 ಹಾಗೂ ಪ್ರೌಢಶಾಲೆ-5,360 ಮಾತ್ರ) ಪೋಷಕರ ಸಭೆಯಲ್ಲಿ ಪೋಷಕರಿಗೆ, ವೇಳಾಪಟ್ಟಿ ಯಲ್ಲಿರುವಂತೆ ಪೋಷಕರ ಸಭೆಯ ಹಿನ್ನೆಲೆ
ಹಾಗೂ ನಿಗಧಿಪಡಿಸಲಾಗಿರುವ ವಿಷಯಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸಬೇಕಾಗಿರುತ್ತದೆ ಮಾಡಲಾಗಿರುವ ಸಭೆಯ ಫೋಟೋ ಮತ್ತು ವರದಿಯನ್ನು ssksdmc@gmail.com ಗೆ ಕಳುಹಿಸು ವುದು. ಹಾಗೂಮೇಲ್ಕಂಡ ಅನುದಾನವನ್ನು ಸಂಬಂಧಿ ಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ component 2.3.1.2 ಹಾಗೂ ಸರ್ಕಾರಿ ಪ್ರೌಢ ಶಾಲೆಗಳಿಗೆ component 2.1.1.2 PAB ಅನುಮೋದಿತ ಚಟುವಟಿಕೆ ಅಡಿಯಲ್ಲಿ ಅನುಮೋದಿಸಲಾಗಿರುತ್ತದೆ.
ಶಾಲೆಗಳಲ್ಲಿ, ವೆಚ್ಚವನ್ನು, ಭರಿಸಿಕೊಂಡು, ಅನುದಾನ ವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಬಗ್ಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಖಾತ್ರಿಪಡಿಸಿಕೊಳ್ಳುವುದು. ಸಂಬಂಧಪಟ್ಟ ಶಾಲೆಗಳಿಂದ ಉಪಯೋಗಿತ ಪ್ರಮಾಣ ಪತ್ರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರು ಪಡೆದು ಕ್ರೋಢೀಕರಿಸು ವುದು ಕ್ರೋಢೀಕರಿಸಿದ ಉಪಯೋಗಿತ ಪ್ರಮಾಣ ಪತ್ರವನ್ನು ಉಪನಿರ್ದೇಶಕರು (ಆಡಳಿತ). ರವರಿಗೆ ಸಲ್ಲಿಸುವುದು.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಕ್ರೋಢೀಕರಿ ಸಿದ ದೃಢೀಕೃತ ಉಪಯೋಗಿತ ಪ್ರಮಾಣ ಪತ್ರವನ್ನು ಪಡೆದು ಉಪನಿರ್ದೇಶಕರು (ಆಡಳಿತ) ರವರು ನೀಡಲಾದ ನಮೂನೆ ಯಲ್ಲಿ ಭರ್ತಿ ಮಾಡಿ ದೃಢೀಕರಿಸಿ ದಿನಾಂಕ: 30.11.2025 ರೊಳಗೆ ರಾಜ್ಯ ಕಚೇರಿಯ ಇ-ಮೇಲ್ ವಿಳಾಸ ssksdmc@gmail.comಗೆ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.






















