ಬೆಂಗಳೂರು –
ಭ್ರಷ್ಟಾಚಾರ ವಿಚಾರ ಕುರಿತಂತೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಮಾಡುತ್ತಿರುವ ಅಭಿಯಾನದ ಆರಂಭದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಮಾಡಿದೆ ಹೌದು ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ಶೀರ್ಷಿಕೆಯ ನಾಮಫಲಕವನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ.
ಈ ಮೂಲಕ ಪೇ ಸಿಎಂ ಪೋಸ್ಟರ್ ಕಾಂಗ್ರೆಸ್ ಅಭಿಯಾನಕ್ಕೆ ರಾಜ್ಯ ಸರ್ಕಾರದಿಂದ ಟಕ್ಕರ್ ಕೊಡಲಾಗಿದೆ.ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಳವಡಿಸಲು ಅದೇಶ ಮತ್ತು ಸುತ್ತೋಲೆ ಹೊರಡಿಸಲಾಗಿದೆ.ರಾಜ್ಯ ಸರ್ಕಾರದ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ರಿಂದ ಮಹತ್ವದ ಆದೇಶ ಮಾಡಲಾಗಿದೆ.
ಅಕ್ಟೋಬರ್ 2 ರಿಂದ 20 ರವರೆಗೆ ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನ ಹಮ್ಮಿಕೊಂಡಿರುವ ರಾಜ್ಯ ಸರ್ಕಾರ ತನ್ನ ಮೇಲಿನ ಆರೋಪ ಮುಕ್ತವಾಗಲು ಹೊರಟಿದೆ.ಈ ಅಭಿಯಾನ ವರ್ಷ ವಿಡಿ ನಡೆಯಲಿ ಎಂಬ ಬಗ್ಗೆ ಜನ ಆಗ್ರಹ ವ್ಯಕ್ತವಾಗುತ್ತಿದೆ.
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಲಂಚದ ಅವತಾರ ಹೆಚ್ಚಾಗಿದೆ.ಯಾವುದೇ ಒಂದು ಕೆಲಸ ಆಗಲು ಲಂಚ ಕೊಡಲೇಬೇಕು ಎಂಬ ಸ್ಥಿತಿ ಇದೆ ಗುತ್ತಿಗೆ,ಸರ್ಕಾರಿ ಪ್ರಾಜೆಕ್ಟ್ ಲ್ಲೂ ಕಮಿಷನ್ ದಂಧೆ ಹೆಚ್ಚಾಗಿರುವ ಹಿನ್ನೆಲೆ ಸರ್ಕಾರ ಆದೇಶ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.