ಧಾರವಾಡ –
ಹುಬ್ಬಳ್ಳಿ ಜಗದೀಶ ನಗರ ಅರ್ಹ ಫಲಾನುಭ ವಿಗಳ ಸಮೀಕ್ಷೆಗೆ ಸಚಿವ ಸಂತೋಷ ಲಾಡ್ ಸೂಚನೆ.ಹೌದು ಹುಬ್ಬಳ್ಳಿ ವಿಮಾನ ನಿಲ್ದಾಣದ ಹತ್ತಿರ ಜಗದೀಶ ನಗರದಲ್ಲಿ ನಿರ್ಮಿಸಲಾದ 612 ಆಶ್ರಯ ಮನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ಅನರ್ಹ ಫಲಾನುಭವಿಗಳಿದ್ದಲ್ಲಿ ಅಂತಹ ಪ್ರಕರಣಗಳನ್ನು ಸಮೀಕ್ಷೆ ಮಾಡುವಂತೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.
ಧಾರವಾಡ ಜಿಲ್ಲಾಡಳಿತ ಸಭಾಭವನದಲ್ಲಿ ಜಗದೀಶ ನಗರದ ಜನರ ಸಮಸ್ಯೆ ಗಿರಣಿಚಾಳ ಜನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಗದೀಶ ನಗರದ 16 ಎಕರೆ ಜಾಗೆಯಲ್ಲಿ 2004 ರಲ್ಲಿ 612 ಮನೆಗಳನ್ನು ಜಿಲ್ಲಾಡಳಿತವು ಆಶ್ರಯ ಸಮಿತಿಯಿಂದ ಮನೆಗಳನ್ನು ನಿರ್ಮಿಸಲಾಗಿತ್ತು.
ಈ ಪೈಕಿ 188 ಮನೆಗಳ ಜಾಗೆಯನ್ನು ವಿಮಾನ ನಿಲ್ದಾಣದ ವಿಸ್ತರಣೆಗೆ ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಮನೆಗಳಲ್ಲಿ ವಾಸ್ತವ್ಯ ಹೂಡುವ 150 ಜನರನ್ನು ಪಟ್ಟಿ ಮಾಡಲಾಗಿತ್ತು.38 ಜನರು ಸಮೀಕ್ಷೆ ಸಮಯ ದಲ್ಲಿ ಮನೆಯಲ್ಲಿರದ ಕಾರಣ ಅವರನ್ನು ಕೈ ಬಿಡಲಾಗಿತ್ತೆಂದು ನಿವಾಸಿಗರು ಸಚಿವರ ಗಮನಕ್ಕೆ ತಂದರು.
38 ಜನರು ಅರ್ಹರಿರುವ ಬಗ್ಗೆ ಇನ್ನೊಮ್ಮೆ ಸಮೀಕ್ಷೆ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಚಿವರು ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ತಿಳಿಸಿದರು. ಉಳಿದ 424 ಫಲಾನುಭವಿಗಳನ್ನು “ನನ್ನ ಮನೆ ನನ್ನ ಹಕ್ಕು” ಯೋಜನೆ ಯಡಿ 2015 ರಲ್ಲಿ ಸಮೀಕ್ಷೆ ಮಾಡಲಾಗಿತ್ತು.
ಈ ಪೈಕಿ 166 ಫಲಾನುಭವಿಗಳ ಆಯ್ಕೆ ಬಗ್ಗೆ ಜಗದೀಶ್ ನಗರ ನಿವಾಸಿಗರು ಸಂದೇಹ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಇವರನ್ನು ಸಹ ಆಯ್ಕೆ ಮಾನದಂಡಗಳ ಪ್ರಕಾರ ಪುನರ್ ಸಮೀಕ್ಷೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಅರವಿಂದ ಬೆಲ್ಲದ ಅವರು ಮಾತ ನಾಡಿ ವಿಮಾನ ನಿಲ್ದಾಣದ ಸುತ್ತ 1248 ಮನೆಗಳ ಆಶ್ರಯ ಅಪಾರ್ಟ್‍ಮೆಂಟ್ ನಿರ್ಮಿಸಲಾಗು ತ್ತಿದ್ದು ಅಗತ್ಯವಿರುವ ಅರ್ಹ ಫಲಾನುಭವಿಗಳಿಗೆ ಇಲ್ಲಿಯೂ ಪರಿಗಣಿಸಲಾಗುವುದೆಂದರು.
ನಂತರ ಗಿರಣಿಚಾಳ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಸಚಿವರು 7.28 ಎಕರೆಯಲ್ಲಿ 525 ಮನೆಗಳಿದ್ದು 70 ವರ್ಷಗಳಿಂದ ವಾಸಿಸುತ್ತಿದ್ದಾರೆ. ಇವರಿಗೆ ಹಕ್ಕುಪತ್ರ ನೊಂದಣಿಗೆ ಅನುಕೂಲವಾ ಗುವಂತೆ ಮಹಾನಗರ ಪಾಲಿಕೆ ಆಯುಕ್ತರೊಂ ದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲಾಗು ವುದೆಂದು ತಿಳಿಸಿದರು.
ನೂತನ ಬಸ್ ನಿಲ್ದಾಣದ ಹತ್ತಿರವಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಅಗತ್ಯವಿರುವ ಹೆಚ್ಚಿನ ಸ್ಥಳವನ್ನು ಹಾಗೂ ಮೂಲಭೂತ ಸೌಕರ್ಯ ಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಪಾಲಿಕೆ ಆಯುಕ್ತರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಎಸಿ ಅಶೋಕ ತೇಲಿ ಹಾಗೂ ಇತರರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ……