ಬಸವನ ಬಾಗೇವಾಡಿ –
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ ಯಿಂದ ತಾಲೂಕಿನ ಸಮಸ್ತ ಮುಖ್ಯ ಗುರುಗಳೇ
2023-24 ನೇ ಶೈಕ್ಷಣಿಕ ವರ್ಷಕ್ಕೆ ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಲಾಗಿದ್ದು ಈ ಕೆಳಗಿನ ಷರತ್ತುಗಳನ್ನು ಗಮನದಲ್ಲಿರಿಸಿಕೊಂಡು ನೇಮಕಾತಿ ಮಾಡಿಕೊಳ್ಳಬೇಕು.
ಹಂಚಿಕೆ ಮಾಡಿದ ಸಂಖ್ಯೆ ಪ್ರಕಾರ ನೇಮಕ ಮಾಡಿಕೊಳ್ಳಬೇಕು.ಹಂಚಿಕೆ ಮಾಡಿದ ವಿಷಯದ ಅತಿಥಿ ಶಿಕ್ಷಕರು ನೇಮಕ ಮಾಡಿಕೊಳ್ಳಬೇಕು* .
ನಿಗದಿ ಪಡಿಸಿದ ವಿದ್ಯಾರ್ಹತೆಯನ್ನು ಕಡ್ಡಾಯ ವಾಗಿ ಹೊಂದಿರಲೇಬೇಕು.
ಅತಿಥಿ ಶಿಕ್ಷಕರ ದೈನಂದಿನ ಹಾಜರಾತಿ ಪುಸ್ತಕ ವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು.ಶಾಲೆಗೆ ಹೊಸ ನೇಮಕಾತಿ ಅಥವಾ ವರ್ಗಾವಣೆ ಮೂಲಕ ಅಥವಾ ಇತರೆ ಕಾರಣಗಳಿಂದ ಶಿಕ್ಷಕರ ಹಾಜರಾದ ಸಂದರ್ಭದಲ್ಲಿ ಅತಿಥಿ ಶಿಕ್ಷಕರನ್ನು ಅಂದೇ ಬಿಡುಗಡೆಗೊಳಿಸಬೇಕು.
ಅತಿಥಿ ಶಿಕ್ಷಕರು ಮಧ್ಯದಲ್ಲಿ ಬಿಟ್ಟು ಹೋದರೆ ಅವರ ಬದಲಾಗಿ ಬೇರೆಯವರನ್ನು ನೇಮಕ ಮಾಡಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು.
ಸರ್ಕಾರದಿಂದ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಕಾರ್ಯಾಲಯಕ್ಕೆ ಜಮಾ ಆದ ನಂತರ ಗೌರವ ಧನವನ್ನು ಅತಿಥಿ ಶಿಕ್ಷಕರ ಖಾತೆಗೆ ನೀಡಲಾಗು ವುದು.ಪ್ರತಿ ತಿಂಗಳು ಅತಿಥಿ ಶಿಕ್ಷಕರ ಹಾಜರಾತಿ ಪುಸ್ತಕದ ಝೆರಾಕ್ಸ್ ಪ್ರತಿಯನ್ನು ತಮ್ಮ ಕ್ಲಸ್ಟರ್ ದ ಸಿ ಆರ್ ಪಿ ಅವರಿಗೆ ಒಪ್ಪಿಸಬೇಕು.*
ಅಗತ್ಯ ದಾಖಲೆಗಳನ್ನು ಕಾರ್ಯಾಲಯಕ್ಕೆ ಒಪ್ಪಿಸಬೇಕು ದಾಖಲೆಗಳು ಈ ಕೆಳಗಿನಂತೆ ಇವೆ
ಮುಖ್ಯ ಗುರುಗಳಿಂದ ನೇಮಕಾತಿ ಮಾಡಿಕೊಂಡ ಬಗ್ಗೆ ವರದಿ(ಮು ಗು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರ ಸಿಹಿ)
✍️ವಿದ್ಯಾರ್ಹತೆಯ ಅಂಕಪಟ್ಟಿಗಳು(ಝೆರಾಕ್ಸ್)
✍️ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಪ್ರತಿ
✍️ನಿಗಧಿತ ನಮೂನೆ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಬಸವನಬಾಗೇವಾಡಿ.
ಸುದ್ದಿ ಸಂತೆ ನ್ಯೂಸ್…..