This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ರಾಜ್ಯದ HM ಗಳಿಗೆ ಮಹತ್ವದ ಸೂಚನೆ – ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ…..

ರಾಜ್ಯದ HM ಗಳಿಗೆ ಮಹತ್ವದ ಸೂಚನೆ – ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ಆದೇಶಿಸಿತ್ತು ಅದರಂತೆ ಜಾರಿಗೊಳಿಸಿ ಆದೇಶ ಕೂಡ ಮಾಡಿದೆ. ಆದರೇ ಕೆಲ ಪ್ರಾಂಶುಪಾಲರು ವರ್ಗಾವಣೆ ಯಾದ ನಂತ್ರ ಉಂಟಾಗಿರುವ ಸಮಸ್ಯೆ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಹಾಲಿ ಹೆಚ್.ಎಂಗಳಿಗೆ ಮಹತ್ವದ ಸೂಚನೆಯನ್ನು ಹೊರಡಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಸಂಬಂಧ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಿಂದ ಅಭಿವೃದ್ಧಿಪಡಿಸಲಾ ಗಿರುವ ತಂತ್ರಾಂಶವನ್ನು ಬಳಸಿಕೊಂಡು ಮುಖ್ಯೋ ಪಾಧ್ಯಾಯರುಗಳು ತಮ್ಮ ಶಾಲೆಯ ವಿದ್ಯುತ್ ಸಂಪರ್ಕದ ವಿವರವನ್ನು ಆನ್‌-ಲೈನ್‌ನಲ್ಲಿ ದಾಖಲಿಸಲು ಉಲ್ಲೇಖ(1)ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ

ಈ ಕುರಿತು ಆನ್‌-ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಮುಂಚೆ ಕಾರ್ಯ ನಿರ್ವಹಿಸುತ್ತಿದ್ದ ಶಾಲಾ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆಗೆ OTP One Time Password) ಸ್ವೀಕೃತಿಯಾಗುತ್ತಿರುವ ಬಗ್ಗೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಾಲಾ ಮುಖ್ಯೋಪಾಧ್ಯಾಯರುಗಳಿಂದ ದೂರುಗಳು ಬರುತ್ತಿರುವುದು ಕಛೇರಿ ಗಮನಕ್ಕೆ ಬಂದಿರುತ್ತದೆ.

ಈ ಬಗ್ಗೆ ಸ್ಯಾಟ್ಸ್ (SATS) ತಂತ್ರಾಂಶದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಾಲಾ ಮುಖ್ಯೋ ಪಾಧ್ಯಾಯರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್‌ ಮಾಡಬೇಕಾಗಿರುತ್ತದೆ. ಸ್ಯಾಟ್ಸ್ (SATS) ತಂತ್ರಾಂಶದಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಲು ಈ ಕೆಳಕಂಡ ಕ್ರಮ ಅನುಸರಿಸಬೇಕಾಗಿದೆ.

ಸ್ಯಾಟ್ಸ್ (SATS) ತಂತ್ರಾಂಶದಲ್ಲಿ ಶಾಲಾ ಮುಖ್ಯೋ ಪಾಧ್ಯಾಯರ ಲಾಗಿನ್‌ನಲ್ಲಿ ಲಾಗಿನ್ ಆಗಬೇಕು.
SCHOOL MANAGEMENT UPDATE SCHOOL INFO AND UDISE PLUS Dow Option ಮೇಲೆ ಕ್ಲಿಕ್ ಮಾಡಬೇಕು.ನಂತರ Section 1: School Profile ನಲ್ಲಿ A(1) School Particular ಎಂಬ Option ಮೇಲೆ ಕ್ಲಿಕ್ ಮಾಡಬೇಕು.

School Details ಮೆನುವಿನ Sl.No. 1.14(a) Office/Head of School Phone No. Option ನಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ Scrool Down ಮಾಡಿ Update ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಅನಂತರ ಉಚಿತ ವಿದ್ಯುತ್‌ಗಾಗಿ ಆನ್-ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಉಲ್ಲೇಖ(1)ರ ಸುತ್ತೋಲೆಯಂತ ಕ್ರಮವಹಿಸಬೇಕಾಗಿದೆ.

ಈ ಬಗ್ಗೆ ತಮ್ಮ ವ್ಯಾಪ್ತಿಯ ಶಾಲಾ ಮುಖ್ಯೋ ಪಾಧ್ಯಾಯರುಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಬಿಇಓಗಳಿಗೆ ಸೂಚಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk