ಶಾಲಾ ಆರಂಭಕ್ಕೂ ಮುನ್ನ ಶಾಲಾ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆಗಳು – ಇಲಾಖೆಯ ಮೇಲಾಧಿಕಾರಿಗಳಿಂದ ಮಹತ್ವದ ಸೂಚನೆಗಳು…..

Suddi Sante Desk
ಶಾಲಾ ಆರಂಭಕ್ಕೂ ಮುನ್ನ ಶಾಲಾ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆಗಳು – ಇಲಾಖೆಯ ಮೇಲಾಧಿಕಾರಿಗಳಿಂದ ಮಹತ್ವದ ಸೂಚನೆಗಳು…..

ಬೆಂಗಳೂರು

ಶಾಲಾ ಆರಂಭಕ್ಕೂ ಮುನ್ನ ಶಾಲಾ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆಗಳು ಇಲಾಖೆಯ ಮೇಲಾಧಿಕಾರಿಗಳಿಂದ ಮಹತ್ವದ ಸೂಚನೆಗಳು ಹೌದು ಇನ್ನೇನು ಬೇಸಿಗೆ ರಜೆ ಮುಗಿದು ಶೈಕ್ಷಣಿಕ ವರ್ಷ ಆರಂಭವಾಗಲಿದ್ದು ಇದರ ನಡುವೆ ಶಿಕ್ಷಣ ಇಲಾಖೆ ರಾಜ್ಯದ ಶಾಲಾ ಮುಖ್ಯಸ್ಥರಿಗೆ ಕೆಲವೊಂದಿಷ್ಟು ಮಹತ್ವದ ಸೂಚನೆಗಳನ್ನು ನೀಡಿದೆ.

ಹೌದು 2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕ ಸೇರಿದಂತೆ ಶಾಲಾ ಮುಖ್ಯಸ್ತರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆಗಳನ್ನು ತಿಳಿಸಲಾಗಿದೆ.ಶೈಕ್ಷಣಿಕ ಮಾರ್ಗ ದರ್ಶಿ 2024-25 ಪುಸ್ತಕವನ್ನು ಶಾಲಾ ಹಂತದಲ್ಲಿ ನಿಯಮಾನುಸಾರ ಮುದ್ರಿಸಿಕೊಂಡು ಅನುಷ್ಠನ ಮಾಡಬೇಕು.ಈ ಬಗ್ಗೆ ರಾಜ್ಯ ಪಠ್ಯಕ್ರಮದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕುರಿತ ವಾರ್ಷಿಕ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದ ಅನುಸಾರ 2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯನ್ನು ಸಿದ್ಧಪಡಿಸಲಾಗಿದೆ

ಸದರಿ ಶೈಕ್ಷಣಿಕ ಮಾರ್ಗದರ್ಶಿಯು ಇಲಾಖೆಯ ಬೋಧಕ ಮತ್ತು ಬೋಧಕೇತರ ವೃಂದಗಳ ಅಧಿ ಕಾರಿಗಳು 1 ಸಿಬ್ಬಂದಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ ಮೇಲುಸ್ತುವಾರಿ ಮಾಡುವ ನೋಡಲ್‌ ಅಧಿಕಾರಿಗಳಿಗೆ ಶಾಲೆಗಳಲ್ಲಿ ಮತ್ತು ಕಛೇರಿಗಳಲ್ಲಿ ಪ್ರಗತಿ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಲು ಬಹಳ ಉಪಯುಕ್ತ ವಾದ ಪುಸ್ತಕವಾಗಿರುವುದರಿಂದ ಸಾರ್ವತ್ರಿಕ ವಾಗಿ ಲಭ್ಯಪಡಿಸುವ ಸಲುವಾಗಿ

https://schoolecucation.karnataka.gov.in/ ರಲ್ಲಿ ಸಾಮಾನ್ಯ ಸುತ್ತೋಲೆ ವಿಭಾಗದಲ್ಲಿ ಅಳವಡಿಸಲಾಗಿದೆ.ರಾಜ್ಯಾದ ಎಲ್ಲಾ ಶಾಲೆಗಳ ಮುಖ್ಯಸ್ಥರು ಈ ಮಾರ್ಗಸೂಚಿಯನ್ನು ಸದರಿ ಅಂತರ್ಜಾಲ ತಾಣದ ಮೂಲಕ ಡೌನ್‌ಲೋಡ್ ಮಾಡಿಕೊಂಡು, ನಿಯಮಾನುಸಾರ ಮುದ್ರಿಸಿ ಕೊಂಡು. ಅನುಪಾಲನೆ ಮಾಡುವುದು. ಸದರಿ ಮುದ್ರಣ ಕಾರ್ಯಕ್ಕಾಗಿ ಆಯಾ ಶಾಲೆಯಲ್ಲಿ ಲಭ್ಯವಿರುವ ಅನುದಾನದಿಂದ

ರೂ 350/- (ರೂ ಮುನ್ನೂರ ಐವತ್ತು ರೂಪಾ ಯಿಗಳು ಮಾತ್ರ) ಗಳ ಗರಿಷ್ಠ ಮಿತಿಯೊಳಗೆ ವೆಚ್ಚವನ್ನು ನಿಯಮಾನುಸಾರ ಭರಿಸಲು ತಿಳಿಸಿದೆ ಈ ಕುರಿತಾದ ಲೆಕ್ಕ ಪತ್ರಗಳನ್ನು ಆಯಾ ಶಾಲೆ ಯಲ್ಲಿ ನಿಯಮಾನುಸಾರ ಕಾಯ್ದಿರಿಸಿ ತಪಾಸಣೆ ಸಮಯದಲ್ಲಿ ಹಾಜರು ಪಡಿಸಲು ಸೂಚಿಸುತ್ತಾ, ಈ ಶೈಕ್ಷಣಿಕ ಮಾರ್ಗಸೂಚಿಯನ್ನು ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ಪ್ರತಿ ಮಾಹವಾರು ನಿಗದಿಪಡಿಸಿದ

ದೈನಂದಿನ ಚಟುವಟಿಕೆಗಳಂತೆ ಪರಿಶೀಲಿಸಿ, ಅನುಪಾಲನೆ ಮಾಡುವುದರೊಂದಿಗೆ ವಿದ್ಯಾರ್ಥಿ ಗಳನ್ನು ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಲು ಈ ಮೂಲಕ ಸೂಚಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.