ಹುಬ್ಬಳ್ಳಿ –
ಹೌದು ಅಪರಾಧ ವರದಿಯಾದ 24 ಗಂಟೆಗೆ ಒಳಗೆ ಮನೆಗಳ್ಳತನ ಮಾಡಿದ ಆರೋಪಿ ಯನ್ನು ಹುಬ್ಬಳ್ಳಿಯ ಕಸಬಾ ಠಾಣೆ ಪೊಲೀಸರು ಎಡೆಮೂರಿ ಕಟ್ಟಿದ್ದಾರೆ
19.06.2023 ರಂದು ಹುಬ್ಬಳ್ಳಿ ಯ ಕಸಬಾಪೇಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ವೊಂದು ನಡೆದಿತ್ತು.ನೇಕಾರನಗರದ ಆದರ್ಶ ಕಾಲೋನಿಯಲ್ಲಿರುವ ಈಶ್ವರ ತಂದೆ ನಾಗಪ್ಪ ಬೇನಾಳ ಇವರ ಮನೆಗೆ ಕನ್ನ ಹಾಕಲಾಗಿತ್ತು.
ಬಂಗಾರ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು ಈ ಬಗ್ಗೆ ಕಸಬಾಪೇಟೆ ಪೊಲೀಸ ಠಾಣೆಯಲ್ಲಿ ಕೂಡಾ ಪ್ರಕರಣ ದಾಖಲಾಗಿತ್ತು.ಅಪರಾಧ ಸಂಖ್ಯೆ 55/2023 ಕಲಂ, 454, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು
ಪ್ರಕರಣ ದಾಖಲಿಸಿಕೊಂಡು ಪೊಲೀಸ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ ಉಪ ಪೊಲೀಸ್ ಆಯುಕ್ತರು(ಕಾ ವ ಸು) ಹು-ಧಾ,
ಉಪ ಪೊಲೀಸ್ ಆಯುಕ್ತರು(ಅ ವ ಸಂ) ಹು-ಧಾ ಹಾಗೂ ಸಹಾಯಕ ಪೊಲೀಸ ಆಯುಕ್ತರು,
ಹುಬ್ಬಳ್ಳಿ ಶಹರ ದಕ್ಷಿಣ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ
ಹುಬ್ಬಳ್ಳಿ ಕಸಬಾಪೇಟೆ ಪೊಲೀಸ ಠಾಣೆಯ
ಪೊಲೀಸ ಇನ್ಸ್ಪೆಕ್ಟರ್ ರಾಘವೇಂದ್ರ ಹೆಚ್. ಹಳ್ಳೂರ ರವರ ನೇತೃತ್ವದಲ್ಲಿ ವಿಶ್ವನಾಥ ಎಮ್.
ಆಲಮಟ್ಟಿ, ಪಿ.ಎಸ್.ಐ(ಅವಿ) ರವರು ಒಂದು ತಂಡವನ್ನು ರಚಿಸಲಾಗಿತ್ತು
ಹಳೇಹುಬ್ಬಳ್ಳಿ ಬೇಪಾರಿ ಪ್ಲಾಟ್‍ದಲ್ಲಿವಾಸವಿರುವ ಪೇಬ್ರಿಕೇಶನ್ ಕೆಲಸ ಮಾಡುವ ಒಬ್ಬ ವ್ಯಕಿಯನ್ನು ಬಂಧಿಸಿ ಅವನಿಂದ ಕಸಬಾಪೇಟೆ ಪೊಲೀಸ ಠಾಣೆಯ ಪ್ರಕರಣದಲ್ಲಿ ಕಳ್ಳತನವಾದ ಬಂಗಾರದ ಆಭರಣಗಳು ಒಟ್ಟು 183.ಗ್ರಾಂ 5 ಮಿಲಿ ಗ್ರಾಂ ತೂಕದ 7,34,000/-ರೂ ಮೌಲ್ಯದ ಬಂಗಾರದ ಆಭರಣಗಳನ್ನು ಜಪ್ತಮಾಡಿ ವಶಕ್ಕೆ ಪಡೆದುಕೊಂಡು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮನೆಗಳ್ಳತನ ಮಾಡಿದ ಆರೋಪಿತನಿಗೆ ಹಾಗೂ ಕಳ್ಳತನವಾದ ಬಂಗಾರದ ಆಭರಣಗಳನ್ನು ಪತ್ತೆ
ಮಾಡಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿ ಯಾದ ರಾಘವೇಂದ್ರ ಹಳ್ಳೂರ, ಪಿ.ಐ ಕಸಬಾ ಪೇಟೆ ಪೊಲೀಸ ಠಾಣೆ, ವಿಶ್ವನಾಥ ಎಮ್ ಆಲಮಟ್ಟಿ ಪಿ.ಎಸ್.ಐ(ಅ.ವಿ), ಹಾಗೂ ತಂಡದ ಸಿಬ್ಬಂದಿಯರಾದ, ಎಮ್ ಡಿ ರಾಠೋಡ್.
ಹೆಚ್.ಸಿ-1689, ಎಫ್ ಬಿ ತಳವಾರ. ಸಿ.ಹೆಚ್.ಸಿ-1712, ಮಾಹಾಂತೇಶ ಸರಕಾರ. ಹೆಚ್.ಸಿ-1732,ಎಸ್ ಎ ಚೋಪಾದರ. ಹೆಚ್.ಸಿ-1784, ಎಲ್ ವಾಯ್ ಪಾಟೀಲ, ಸಿ.ಹೆಚ್.ಸಿ-1777, ರಾಜು ರಾಠೋಡ
ಪಿಸಿ-2568, ಪಾಲಯ್ಯ ಎನ್ ಸಿಪಿಸಿ-3126, ರಮೇಶ ಎಸ್ ಮಾನ್ವಿ ಪಿಸಿ-2474, ಹನುಮಂತ
ಕರಗಾಂವಿ. ಪಿಸಿ-2909, ಹಜರೇಸಾಬ ರಾಮಪುರ. ಪಿಸಿ-2753, ಮಲ್ಲಯ್ಯ ಹಿರೇಮಠ. ಪಿಸಿ-2890 ಇವರಿಗೆ ಮಾನ್ಯ ಪೊಲೀಸ ಆಯುಕ್ತರು, ಹುಬ್ಬಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.