ಹುಬ್ಬಳ್ಳಿ –
ಅಕ್ರಮ ಪಡಿತರ ಅಕ್ಕಿ ದಂಧೆಯ ಪ್ರಕರಣ ದಲ್ಲಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿದ ನಂತರ ಏನೇಲ್ಲಾ ತಂತ್ರಗಾರಿಕೆ ನಂತರ ಆರೋಪಿಗಳನ್ನು ಅದಲು ಮಾಡಿ ಅದಲ-ಬದಲ ಕಂಚಿ ಬದಲ್ ಮಾಡಿ ಪೋಲೀಸರು ಆಡಿದ್ದೇ ಆಟ ಆಗಿದೆ.
ನಿನ್ನೆ ಕಸಬಾ ಪೋಲೀಸ ಠಾಣಾ ವ್ಯಾಪ್ತಿಯ N A ನಗರದಲ್ಲಿ ಸಣ್ಣ ಅಕ್ರಮ ಪಡಿತರ ಅಕ್ಕಿ ಮೀನ ವೊಂದನ್ನು ಹು ಧಾ ಸಿಸಿಬಿ ಪೋಲೀಸರು ಬಲೆಗೆ ಹಾಕಿದ್ದು ಆದರೆ ಬಲೆಗೆ ಬಿದ್ದ ಆ ಮೀನನ್ನು ತಪ್ಪಿಸಿ ಕೊಂಡು ಅದರ ಬದಲು ಬೇರೊಂದು ಮೀನ (ಉಮರಸಾಬ ಅಬ್ದುಲಸಾಬ ಮುಳಗುಂದ) ತಂದು ಪೋಲೀಸರು ದೂರು ದಾಖಲಿಸಿದ್ದಾರೆ
ಕೆಲ ಸಮಯ ಕಾಲ ಏನೇಲ್ಲಾ ಪ್ಲಾನ್ ತಂತ್ರಗಾರಿಕೆ ಮಾಡಿದ ನಂತರ ಸಿಸಿಬಿ ಪೋಲೀಸರು ಬೀಸುವ ಬಲೆ ಹರಿದಿದೆ .ಸಿಸಿಬಿ ಅವರ ಬಳಿ ದೊಡ್ಡ ದೊಡ್ಡ ತಿಮಿಂಗಲುಗಳನ್ನು ಹಿಡಿಯುವ ಬದಲಿಗೆ ಸಣ್ಣ ಸಣ್ಣ ಪ್ರಮಾಣದಲ್ಲಿನ ಮೀನುಗಳನ್ನು ಹಿಡಿಯು ತ್ತಿದ್ದಾರೆ
ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಅವರು ಬೀಸಿದ ಬಲೆಯಲ್ಲಿ ಬಿದ್ದಿರುವುದು ಸಣ್ಣ ಜಂಗೀ ಮೀನು.ಅಲ್ಲಿ ಇನ್ನೂ ದೊಡ್ಡ ದೊಡ್ಡ ಮೀನುಗಳು ಇವೆ.ಅವುಗಳು ಯಾಕೆ ಇವರಿಗೆ ಕಾಣತಾ ಇಲ್ಲಾ.ಆ ಸಣ್ಣ ಮೀನವನ್ನು ಕೈ ಬಿಟ್ಟು ಬೇರೊಂದು ಮೀನ ತಂದು ಕಸಬಾ ಠಾಣೆಯಲ್ಲಿ ದೂರು ದಾಖಲಿಸಿರುವುದು ಗುಟ್ಟಾಗಿ ಉಳಿದಿಲ್ಲಾ
ಹಿಡಿದ ಮೀನ ಬಿಟ್ಟು ಬೇರೊಂದು ಮೀನ ತಂದು ಕೇಸ್ ಮಾಡುವುದರ ಹಿಂದೆ ಎರಡಂಕಿ ಮಂಕಿ ಆಟ ಆಡಿಸಿದರಾ ಸಿಸಿಬಿ ಪೋಲೀಸರು.ಎರಡಂಕಿ ಆಟದ ಹಿಂದೆ ಜನಪ್ರತಿನಿಧಿಯೊಬ್ಬರ ಕೈ ಸಹ ಆಟ ಆಡಿದೆ ಎಂಬ ಮಾತುಗಳು ಈಗ ಜೋರಾಗಿ ಕೇಳಿ ಬರುತ್ತಿವೆ
ಅಕ್ರಮ ಪಡಿತರ ಅಕ್ಕಿ ದಂಧೆ ಹಿಂದೆ ಈ ಸಿಸಿಬಿ ಪೋಲೀಸರು ಬಿದ್ದಿದ್ಯಾಕೆ.ಈ ರೇಡ್ ಹಿಂದೆ ಅಕ್ರಮ ಅಕ್ಕಿ ಡಾನ್ ಒಬ್ಬರು ಕುಂತಲ್ಲೇ ಆಟ ಆಡಿಸುತ್ತಿರುವುದರ ಹಿಂದಿದೆ ಬ್ಯುಸಿನೆಸ್ ಮೈಂಡ್ ಹುಬ್ಬಳ್ಳಿಯಲ್ಲಿ ಎಷ್ಟೇ ಅಕ್ರಮ ಅಕ್ಕಿ ಇದ್ದರೂ ಅದು ಡಾನ್ ಗೆ ಹೋಗಬೇಕು ಎಂಬ ಪರಮಾನು ಹೊರಡಿಸಲಾಗಿದೆ ಅಂತೆ.ಡಾನ್ ಗೋಡೌನಗೆ ಅಕ್ಕಿ ಬರದೇ ಇದ್ದರೆ ರೇಡ್ ಗ್ಯಾರಂಟಿ.
ಈಗ ಡಾನ್ ವಿರುದ್ಧ ಸೆಡ್ಡು ಹೊಡೆಯಲು ಇನ್ನೊಂದು ಟೀಮ್ ಸದ್ದಿಲ್ಲದೆ ಹುಬ್ಬಳ್ಳಿಯಲ್ಲಿ ತಯಾರಾಗುತ್ತಿದೆ.ಅದು ಯಾವ ಹಂತಕ್ಕೆ ಬಂದು ನಿಲ್ಲುತ್ತೋ ಗೊತ್ತಿಲ್ಲಾ.ಖಡಕ್ ಪೋಲೀಸ ಕಮೀಷನರ್ ಮೇಡಂ ಈ ಅಕ್ಕಿ ದಂಧೆಯನ್ನ ಸೀರಿಯಸ್ ಆಗಿ ಮಟ್ಟ ಹಾಕಬೇಕಾಗಿದೆ.
ಅಲ್ಲದೇ ನಿನ್ನೆ ಕಸಬಾ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಪಡಿತರ ಅಕ್ಕಿ ದಂಧೆಯ ಹಿಂದೆ ಕೈ ಕೈ ಬದಲಾಗಿದ್ದರ ಅಸಲಿಯತ್ತನ್ನ ತನಿಖೆ ಮಾಡಿ ಸತ್ಯಾ ಸತ್ಯತೆಯನ್ನ ಹೊರತರಬೇಕಾಗಿದೆ.ಸಣ್ಣ ಅಕ್ರಮ ಅಕ್ಕಿ ದಂಧೆಯಲ್ಲಿ ಹೀಗಾದರೆ ಇನ್ನೂ ಲೆಕ್ಕಕ್ಕಿಲ್ಲದಷ್ಟು ಅಕ್ಕಿ ದಂಧೆಕೋರರು ಇದ್ದಾರೆ. ಜೊತೆಗೆ ಡಾನ್ ಗಳಿದ್ದಾರೆ. ಅವರಿಂದ ಏನು ಎನ್ನುವ ಪ್ರಶ್ನೆ ಈಗ ಜನರನ್ನ ಕಾಡತಾ ಇದೆ.
ಹುಬ್ಬಳ್ಳಿಯಲ್ಲಿ ವ್ಯವಸ್ಥಿತವಾಗಿ ನಕಲಿ ದಾಖಲೆ ತಯಾರಿಸಿ ನಡೆಸಲಾಗುತ್ತಿರುವ ಡಾನ್ ನ ಅಕ್ಕಿ ಕರಾಳ ದಂಧೆ ಪೋಲೀಸರಿಗೆ,ಆಹಾರ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನೆ ಇರುವು ದು ಯಾಕೆ ಎನ್ನುವುದು ಇದುವರೆಗೂ ತಿಳಿದು ಬಂದಿಲ್ಲಾ ಎನ್ನುವುದು ವಿಪರ್ಯಾಸವೆ ಸರಿ….
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..