ದಾವಣಗೇರಿ –
ಮಹಾಮಾರಿ ಕೋವಿಡ್ ನಡುವೆ ಶೈಕ್ಷಣಿಕ ವರ್ಷದ ಆರಂಭಕ್ಕೆ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಮುಂದಾ ಗಿದ್ದು ಈಗಾಗಲೇ ಕೋವಿಡ್ ನ ಆತಂಕದಲ್ಲಿರುವ ನಾಡಿನ ಶಿಕ್ಷಕರು ಈಗ ಮತ್ತೊಂದು ದೊಡ್ಡ ತಲೆ ನೋವು ಆರಂಭವಾಗುವಂತೆ ಕಂಡು ಬರುತ್ತಿದೆ.
ಹೌದು ಈಗಾಗಲೇ ಈ ಒಂದು ಮಹಾಮಾರಿಗೆ ಸಾವಿರಾರು ಶಿಕ್ಷಕರು ನಿಧನರಾಗಿದ್ದು ಹೀಗಾಗಿ ಇದರಿಂದ ತುಂಬಾ ಆತಂಕದಲ್ಲಿರುವ ಶಿಕ್ಷಕರಿಗೆ ಇಲಾಖೆ ಈಗ ಮತ್ತೊಂದು ಶಾಕ್ ನೀಡಿದೆ.ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಎಲ್ಲಾ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ವಿಷಯಕ್ಕನುಗುಣವಾಗಿ ಸೇತುಬಂಧ ಸಾಮರ್ಥ್ಯ ಅನುಗುಣವಾಗಿ 1 ರಿಂದ 9 ನೇ ತರಗತಿಯ ಎಲ್ಲ ಮಕ್ಕಳಿಗನುಗುಣವಾಗಿ 3 ವಿಧದ ಗುಂಪುಗಳಿಗುಣವಾಗಿ ಚಟುವಟಿಕೆಗಳನ್ನು ರೂಪಿಸಿ.
ದಿನಾಂಕ:-10/06/2021 ರಿಂದ 10/08/2021 ರವರಿಗೆ ಪ್ರತಿ ದಿನಾಂಕಕ್ಕೆ ಚಟುವಟಿಕೆಗಳ ಕ್ರಿಯಾ ಯೋಜನೆಯನ್ನು ಈ ಮೇಲಿನ ಪಾರ್ಮೆಟ್ ಬಳಸಿ ಸಿದ್ದಪಡಿಸಿ ದಿನಾಂಕ -05/06/2021 ರೊಳಗೆ ಸಿ.ಆರ್.ಪಿಯವರಿಗೆ ತಲುಪಿಸಲು ಸೂಚನೆಯನ್ನು ನೀಡಿದ್ದಾರೆ. ಈ ಒಂದು ಸದರಿ ಪ್ರಕ್ರಿಯೆಯನ್ನು ಶಾಲೆ ಪ್ರಾರಂಭದ ದಿನಾಂಕದ ವರೆಗೆ ವಿನಾಯ್ತಿ ನೀಡುವಂತೆ ಮನವಿ ಸಲ್ಲಿಸಲಾಯಿತು.
ದಾವಣಗೇರಿಯ ಮಾನ್ಯ ಉಪನಿದೇ೯ಶಕರು (ಆಡಳಿತ) ರವರಿಗೆ ಮನವಿಯನ್ನು ನೀಡಿದರು. ಉಪನಿರ್ದೇಶಕರಿಗೆ ಮನವಿಯನ್ನು ನೀಡಿದ ಶಿಕ್ಷಕರು ಕೂಡಲೇ ಈ ಒಂದು ವಿಚಾರ ಕುರಿತಂತೆ ಶಿಕ್ಷಕರ ಮನವಿಗೆ ಸ್ಪಂದಿಸುವಂತೆ ಒತ್ತಾಯವನ್ನು ಮಾಡಿದರು. ಈಗಾಗಲೇ ಈ ಒಂದು ಕೋವಿಡ್ ನಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಸಮಸ್ಯೆ ಯಲ್ಲಿದ್ದು ಇದರಿಂದ ಯಾವುದೇ ಕಾರಣಕ್ಕೂ ಅವ ಕಾಶವನ್ನು ನೀಡದೆ ಮುಂದೂಡುವಂತೆ ಒತ್ತಾಯವ ನ್ನು ಮಾಡಿದರು. ಜಿಲ್ಲಾ ಅಧ್ಯಕ್ಷರಾದ ರಾಮಪ್ಪ ಅವರ ಮಾಗ೯ದಶ೯ನದಲ್ಲಿ ಜಿಲ್ಲಾ ಸಂಘದ ಗೌರ ವಾಧ್ಯಕ್ಷರಾದ ಎಂ ಸಿದ್ದೇಶ್, ಜಿಲ್ಲಾ ಖಜಾಂಚಿಗಳಾದ ಜೆ.ಆರ್.ಶಿವಲಿಂಗಪ್ಪ, ದಾವಣಗೆರೆ ದಕ್ಷಿಣ ವಲಯ ದ ಅಧ್ಯಕ್ಷರಾದ ಬಸವರಾಜ.ಈ, ಪ್ರಧಾನ ಕಾಯ೯ ದಶಿ೯ಗಳಾದ ಗದಿಗೆಪ್ಪ ಮ್ಯಾಚರ್ ಹಾಗೂ ಉತ್ತರ ವಲಯದ ಅಧ್ಯಕ್ಷರಾದ ಶ್ರೀಮತಿ ಸುಜಾತ ಸೇರಿ ದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿ ತರಿದ್ದರು.