ಮತ್ತೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಶಿಕ್ಷಕರು – ಕರ್ತವ್ಯದ ನಡುವೆ ಮತ್ತೊಂದು ತಲೆನೋವಿನ ನಡುವೆ ಶಿಕ್ಷಕ ಬಂಧುಗಳು…..

Suddi Sante Desk

ಬೆಂಗಳೂರು –

ಟೀಚರ್ ಸರ್ ನಮಗೆ ಇವತ್ತು ಮೊಟ್ಟೆ ಬೇಡ ಬಾಳೆಹಣ್ಣು ಕೊಡಿ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಹೌದು ಸಧ್ಯ ಶಾಲೆ ಯಲ್ಲಿ ಇಂತಹದೊಂದು ಪರಿಸ್ಥಿತಿ ಯನ್ನು ರಾಜ್ಯದ ಶಿಕ್ಷಕ ಬಂಧಗಳು ಎದುರಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆ ಪರಿಚಯಿಸಿದೆ.ಸಸ್ಯಹಾರಿ ಮಕ್ಕಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಲಾಗುತ್ತಿದೆ ಆದ್ರೆ ಮಕ್ಕಳು ತಮ್ಮ ಆಯ್ಕೆಗೆ ಸ್ಥಿರವಾಗಿ ನಿಂತುಕೊಳ್ತಿಲ್ಲ.ಇದರಿಂದ ಶಿಕ್ಷಕರು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.ಸರ್ಕಾರ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಬಾಳೆಹಣ್ಣು ಮತ್ತು ಮೊಟ್ಟೆ ನೀಡುತ್ತದೆ.ಆದರೆ ಕೆಲ ಮಕ್ಕಳು ಪ್ರತಿದಿನವೂ ತಮ್ಮ ಆಯ್ಕೆ ಬದಲಿಸೋ ಕಾರಣ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಓರ್ವ ವಿದ್ಯಾರ್ಥಿ ಮೊದಲ ವಾರ ಮೊಟ್ಟೆ ಆಯ್ಕೆ ಮಾಡಿ ಕೊಂಡಿರುತ್ತಾನೆ.ಆದ್ರೆ ಆತ ಇತರ ಮಕ್ಕಳ ಜೊತೆಯಲ್ಲಿ ಸೇರಿ ಬಾಳೆಹಣ್ಣು,ಚಿಕ್ಕಿ ಪಡೆಯಲು ಸರತಿ ಸಾಲಿನಲ್ಲಿ ನಿಂತುಕೊಳ್ತಾರೆ.ಕೆಲವೊಮ್ಮೆ ಕೆಲವರು ಗುರುವಾರ, ಶುಕ್ರ ವಾರ ಅಂತಹ ದಿನಗಳಲ್ಲಿ ಮೊಟ್ಟೆ ಸೇವಿಸಲ್ಲ.ಅವರು ಸಹ ಬಾಳೆಹಣ್ಣು ಕೇಳುತ್ತಾರೆ.

ಇಂತಹ ಸಂದರ್ಭದಲ್ಲಿ ಆಹಾರವನ್ನು ಹೊಂದಿಸೋದು ಶಿಕ್ಷಕರಿಗೆ ದೊಡ್ಡ ಕಷ್ಟಕರವಾಗುತ್ತಿದೆ.ಇದನ್ನು ಶಿಕ್ಷಕರು ಕೂಡಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಎರಡು ವಾರಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಯಿಸಿದ ಮೊಟ್ಟೆ,ಬಾಳೆಹಣ್ಣು ಅಥವಾ ಕಡಲೆಕಾಯಿ ಚಿಕ್ಕಿ ನೀಡ ಲಾಗ್ತಿದೆ.ಮೊದಲ ವಾರ ಮೊಟ್ಟೆ ಸೇವಿಸಿದ್ರೆ ಮುಂದಿನ ವಾರ ಬಾಳೆಹಣ್ಣು ಕೇಳುತ್ತಾನೆ.ವಿದ್ಯಾರ್ಥಿಗಳು ತಮ್ಮ ಆಯ್ಕೆಗಳೊಂದಿಗೆ ಸ್ಥಿರವಾಗಿರಲ್ಲ.ಇದರಿಂದ ಆಹಾರ ಕ್ರಮ ನಿರ್ವಹಿಸೋದು ಶಿಕ್ಷಕರಿಗೆ ತೊಂದರೆ ಆಗ್ತಿದೆ ಎಂದು ದಕ್ಷಿಣ ಕನ್ನಡದ ಅಕ್ಷರ ದಾಸೋಹದ ಕಾರ್ಯನಿರ್ವಾಹಕ ಅಧಿಕಾರಿ ಉಷಾ ಎಂ ಎಂದು ಹೇಳಿದರು.

ಪ್ರಧಾನ ಮಂತ್ರಿ ಶಕ್ತಿ ನಿರ್ಮಾಣ್ ಅಡಿಯಲ್ಲಿ ಮೊಟ್ಟೆ ನೀಡೋದನ್ನು ಪ್ರಾರಂಭಿಸಲಾಗಿದೆ.ಈ ಯೋಜನೆಯಡಿ ಶೈಕ್ಷಣಿಕ ವರ್ಷದಲ್ಲಿ 46 ದಿನ ಮಕ್ಕಳಿಗೆ ಬೇಯಿಸಿದ ಮೊಟ್ಟೆ ಬಾಳೆಹಣ್ಣು ಅಥವಾ ಕಡಲೆಕಾಯಿ ಚಿಕ್ಕಿಯನ್ನು ನೀಡ ಲಾಗುತ್ತದೆ.ಶಾಲೆಯಲ್ಲಿ 124 ವಿದ್ಯಾರ್ಥಿಗಳಿದ್ದರೆ 12 ಮಕ್ಕಳು ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳು ಬಾಳೆಹಣ್ಣು ಆಯ್ಕೆ ಮಾಡಿಕೊಂಡರು ಅದೇ ರೀತಿ ಮೊಟ್ಟೆ ಆರ್ಡರ್ ಮಾಡಲಾಗಿತ್ತು ಆದ್ರೆ ಎರಡನೇ ವಾರ ನಮಗೆ ಮೊಟ್ಟೆ ಆಯ್ಕೆ ಮಾಡಿಕೊಂಡವರು ತಮಗೂ ಬಾಳೆಹಣ್ಣು ಅಥವಾ ಚಿಕ್ಕಿ ನೀಡಬೇಕೆಂದು ಬೇಡಿಕೆ ಇರಿಸಿದರು ಹೀಗಾಗಿ ಇದೊಂದು ನಮಗೆ ದೊಡ್ಡ ಸಮಸ್ಯೆ ತಲೆನೋವಾಗಿದೆ ಎಂದು ಶಿಕ್ಷಕರು ಹೇಳತಾ ಇದ್ದಾರೆ

ಕೆಲವು ವಿದ್ಯಾರ್ಥಿಗಳು ಶ್ರಾವಣ ಮಾಸ ಸೇರಿದಂತೆ ಧಾರ್ಮಿಕ ಆಚರಣೆಗಳ ಕಾರಣ ಶುಕ್ರವಾರ ಮೊಟ್ಟೆ ಸೇವಿಸಲ್ಲ.ಹಾಗಾಗಿ ಕೆಲವರನ್ನು ಬಾಳೆಹಣ್ಣಿನಿಂದ ಮೊಟ್ಟೆಗೆ ಬದಲಾಯಿಸಲಾಯ್ತು.ಆದ್ರೆ ಪ್ರತಿದಿನವೂ ಈ ಸಮಸ್ಯೆ ಕಾಣಿಸಿಕೊಳ್ತಿದ್ದು ಇದೊಂದು ಶಾಲಾ ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.