ಬೆಂಗಳೂರು –
ಹೌದು ಇಂತಹ ದೊಂದು ಪ್ರಕರಣ ಬೀದರ್ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 119 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಸಿಕ ವೇತನ ಸಕಾಲಕ್ಕೆ ಸಿಗುತ್ತಿಲ್ಲ.ಇದರಿಂದಾಗಿ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ.
2023ರ ನವೆಂಬರ್‌ನಲ್ಲಿ ತಾಲ್ಲೂಕಿಗೆ 110 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ನೇಮಕ ಗೊಂಡು ಶಾಲೆಗಳಿಗೆ ಹಾಜರಾಗಿದ್ದಾರೆ.ಅವರಲ್ಲದೇ ಶಾಲೆಗಳಲ್ಲಿ ಹುದ್ದೆಗಳು ಖಾಲಿ ಇಲ್ಲದ ಕಾರಣ, 9 ಶಿಕ್ಷಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೆಶಕರ ಕಚೇರಿಯಲ್ಲಿ ಹಾಜರಾಗಿ ವರದಿ ಮಾಡಿಕೊಂಡಿದ್ದರು.
ಒಟ್ಟು 119 ಶಿಕ್ಷಕರು ನಿರಂತರ ವೇತನ ಸಮಸ್ಯೆ ಎದುರಿಸುತ್ತಿದ್ದಾರೆ. 110 ಶಿಕ್ಷಕರ ವೇತನ 2023ರ ಮಾರ್ಚ್‌ನಿಂದ 2024ರ ಆಗಸ್ಟ್‌ವರೆಗೆ ಪಾವತಿ ಯಾಗಿದೆ. ಆದರೆ ಅವರು ನೇಮಕವಾಗಿದ್ದು, 2023ರ ನವೆಂಬರ್‌ನಲ್ಲಿ. ಹೀಗಾಗಿ ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ.. ಹೀಗೆ ನಾಲ್ಕು ತಿಂಗಳ ವೇತನ 10 ತಿಂಗಳಾದರೂ ಬಂದಿಲ್ಲ. ಇದು ಬಾಕಿ ಇರಿಸಿಕೊಳ್ಳಲಾಗಿದೆ ಎಂಬುದು ಶಿಕ್ಷಕರ ಆರೋಪ.
ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಿಚಾರ ಮಾಡಿದರೆ ಬಜೆಟ್ ಬಂದ ಮೇಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂಬುದು ಶಿಕ್ಷಕರ ಅಳಲಾಗಿದೆ. 2023ರ ನವೆಂಬರ್‌ನಲ್ಲಿ ನೇಮಕವಾಗಿ ಡಿಡಿಪಿಐ ಕಚೇರಿಯಲ್ಲಿ ಸೇವೆಗೆ ವರದಿ ಮಾಡಿಕೊಂಡ 9 ಶಿಕ್ಷಕರಲ್ಲಿ (2 ಶಿಕ್ಷಕರಿಗೆ) ಇಬ್ಬರಿಗೆ ಮಾತ್ರ ವೇತನ ದೊರಕಿದೆ.
ಮಾರ್ಚ್ 2023ರಿಂದ ಸೆಪ್ಟೆಂಬರ್-2024ರವರೆಗೆ ವೇತನ ಪಾವತಿಸಲಾಗಿದೆ.ಇಬ್ಬರು ಸರ್ಕಾರಿ ಸೇವೆ ಯಲ್ಲಿ ದ್ವಿತೀಯ ದರ್ಜೆಸಹಾಯಕರಾಗಿದ್ದರು. ಹೀಗಾಗಿ ಅವರಿಗೆ ವೇತನ ಬೇಗ ಲಭಿಸಿದೆ. ಉಳಿದವರು ವೇತನಕ್ಕಾಗಿ ಜಾತಕ ಪಕ್ಷಿಯಂತೆ 11 ತಿಂಗಳಿನಿಂದ ಕಾಯುವಂತಾಗಿದೆ.
ಡಿಡಿಪಿಐ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದವರ ಪೈಕಿ 9 ಮಂದಿಗೆ ಕಳೆದ ಜೂನ್ ತಿಂಗಳಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಅವರ ವೇತನ ವಿಳಂಬಕ್ಕೆ ಎನ್‌ಪಿಎಸ್ ಮತ್ತು ಕೆಜಿಐಡಿ ಹಾಗೂ ಎಚ್‌ಆರ್‌ಎಂಎಸ್ ಆಗದ ಕಾರಣ ವೇತನ ಸಮಸ್ಯೆ ಎದುರಿಸುವಂತಾಗಿದೆ.
ಹೊರತಾಗಿಯೂ ಪದವೀಧರ ಶಿಕ್ಷಕರಿಗೆ ನಿರಂತರ ವೇತನ ಲಭಿಸುವಂತಾಗಲು ಇವರು ಪ್ರತಿ 3 ತಿಂಗಳಿ ಗೊಮ್ಮೆ ಬಜೆಟ್ ತರಿಸಿಕೊಂಡು ವೇತನ ಪಾವತಿಸು ವಂತಾಗಿದೆ.ಆದರೆ ಅವರನ್ನು ನಾನ್ ಪ್ಲಾನ್‌ನಲ್ಲಿ ಸೇರಿಸಿದ್ದರೆ ಎಲ್ಲಾ ಶಿಕ್ಷಕರಂತೆ ನಮಗೂ ನಿಗದಿತ ಸಮಯದಲ್ಲಿ ವೇತನ ಪಡೆಯಬಹುದಾಗಿದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ
ಸುದ್ದಿ ಸಂತೆ ನ್ಯೂಸ್ ಚಿಂಚೊಳಿ…..