ಹುಬ್ಬಳ್ಳಿ –
ಕಾರವಾರ ರೋಡ ನವ ಆಯೋಧ್ಯಾನಗರ ಮೈದಾನ ಆವರಣದಲ್ಲಿ ಡಾ,,ಬಿ.ಆರ್. ಅಂಬೇಡ್ಕರ್ ಅವರ 133.ನೆಯ ಜಯಂತೋ ತ್ಸವ ಆಚರಣೆ ಯುವ ಮುಖಂಡ ರಾಜು ಅನಂತಸಾ ನಾಯಕವಾಡಿ ಸೇರಿದಂತೆ ಹಲವರು ಉಪಸ್ಥಿತಿ……
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರ ಪುಸ್ತಕವನ್ನು ಓದಬೇಕು.ಡಾ,,ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಮತ್ತು ಶೈಕ್ಷಣಿಕ ಸೌಲಭ್ಯ ತನ್ನ ಗುರಿ ಸಾಧಿಸಬಲ್ಲ ದೃಢ ಸಂಕಲ್ಪ ಸಾಹಸ ಮತ್ತು ಕಠಿಣ ಪರಿಶ್ರಮಗಳಿಂದ ಸಾಹಿತ್ಯ ರಾಜಕೀಯ ಅರ್ಥಶಾಸ್ತ್ರ ತತ್ವದರ್ಶನಗ ಳಿಂದ ಮಾತನಾಡತೊಡಗಿದರೆ
ಇಡೀ ಒಂದು ಗ್ರಂಥಾಲಯವೇ ಮಾತನಾಡುತ್ತಿ ದ್ದಂತೆ ಭಾಸವಾಗುತ್ತಿತ್ತು.ಡಾ,,ಬಿ. ಆರ್. ಅಂಬೇಡ್ಕರ ಅವರ ಹಾಕಿಕೊಟ್ಟ ಕ್ರಾಂತಿಕಾರಿಯ ಹೋರಾಟದ ಬದುಕು ಮಾರ್ಗ ಆದರ್ಶವನ್ನು ನೆನಪಿನಲ್ಲಿಟ್ಟುಕೊಂಡು ಮುನ್ನಡೆಯಬೇಕು. ಎಂದು ಧಾರವಾಡ ಲೋಕಸಭಾ ಪಕ್ಷೇತರ ಅಭ್ಯರ್ಥಿ ರಾಜು ಅನಂತಸಾ ನಾಯಕವಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಫಯಾಜ ಸೌದಾಗರ್.ಮುಖಂಡರು ಸಂತೋಷ್ ಅರಿಕೇರಿ. ಸಾಮಾಜಿಕ ಹೋರಾಟಗಾರ ಆನಂದ ದಲಬಂಜನ ಮುಖಂಡರು ವಿಜಯ ದೊಡ್ಡಮನಿ ಮುಖಂಡರು ನಾಗರಾಜ ಗುಂಜಳ.ಹಾಗೂ ವಿವಿಧ ಪರ ದಲಿತ ಸಂಘಟನೆ ಮುಖಂಡರು ಸಾರ್ವಜನಿಕರು ಉಪಸ್ಥಿತಿಯಲ್ಲಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……