ದಾಂಡೇಲಿ –
ದಾಂಡೇಲಿ ಯಲ್ಲಿ ಭಾರತೀಯ ಜನತಾ ಪಕ್ಷ, ಹುಬ್ಬಳ್ಳಿ ಧಾರವಾಡ ಮಹಾನಗರ ಮತ್ತು ಜಿಲ್ಲೆಯ ಪಕ್ಷದ ಜಿಲ್ಲಾ ಪತಿಕ್ಷಣ ವರ್ಗದ ಕಾರ್ಯಾಗಾರ ನಡೆಯುತ್ತಿದೆ. ದಾಂಡೇಲಿ ಯ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಂಡಿರುವ ಈ ಒಂದು ವಿಶೇಷ ಕಾರ್ಯಾಗಾರದಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಛಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಪಾಲ್ಗೊಂಡು ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದರು.
ಅವಳಿ ನಗರದ ಸೇರಿದಂತೆ ಜಿಲ್ಲೆಯಿಂದ ಹಲವಾರು ಕಾರ್ಯಕರ್ತರು ಮುಖಂಡರು ಈ ಒಂದು ಜಿಲ್ಲಾ ಪ್ರತಿಕ್ಷಣ ವರ್ಗದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು ಇದರಲ್ಲಿ ಭಾಗವಹಿಸಿದ ಶಾಸಕರು ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು,ಮಂಡಲ ಅಧ್ಯಕ್ಷರು,ಪ್ರಧಾನ ಕಾರ್ಯದ ರ್ಶಿಗಳು,ವಿವಿಧ ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿ ಕಾರಿಗಳು ಉಪಸ್ಥಿತರಿದ್ದರು.