ಧಾರವಾಡ –

ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಗುರು ತಿಗಡಿ ಅವರ ನೇತ್ರತ್ವದಲ್ಲಿ ಇಂದು ದಿನಾಂಕ 22-6-2021 ರಂದು ಧಾರವಾಡ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಅವರಿಗೆ ಬೇಟಿಯಾಗಿ ಶಿಕ್ಷಕರ ಪ್ರಮುಖ ಬೇಡಿಕೆಗಳಾದ,ಶಾಲಾ ಪ್ರವೇಶಪತ್ರಗಳು, ಮಕ್ಕಳ ಹಾಜರಿ,೧ ನೇ ನಂಬರ ರಿಜಿಸ್ಟರ್,ಮಕ್ಕಳ ವರ್ಗಾವಣೆ ಪ್ರಮಾಣಪತ್ರಗಳನ್ನು ಶಾಲೆಗಳಿಗೆ ಪೂರೈಸುವುದು,ಶಿಕ್ಷಕರ ವೇತನ ಮಾಹಿತಿಯನ್ನು ಎಸ್ ಎಂ ಎಸ್ ಮೂಲಕ ಶಿಕ್ಷಕ ಪ್ರತಿ ತಿಂಗಳು ಶಿಕ್ಷಕ ರಿಗೆ ಕಳಿಸುವುದು,

ಗುರುಸ್ಪಂದನ ಕಾರ್ಯಕ್ರಮ ಮಾಡುವುದು,ಶಿಕ್ಷಕರ ಐಟಿ ರಿಟರ್ನ್ ಸಲ್ಲಿಸಲು ಅನುಕೂಲ ಮಾಡಿಕೊಡು ವದು, ಪ್ರದಾನಗುರುಗಳ ಪ್ರಭಾರೆ ಭತ್ಯೆಯನ್ನು ಬಿಡುಗಡೆ ಮಾಡುವುದು, ಮಕ್ಕಳ ಆನ್ ಲೈನ್ ಟಿಸಿ ಕೊಡುವಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸುವುದು ಸೇರಿ ದಂತೆ (KSPSTA) ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಾರ್ಷಿಕ ಸದಸ್ಯತ್ವವನ್ನು ಕಟಾವಣೆ ಮಾಡುವಾಗ ಮುಂಚಿತವಾಗಿ ಎಲ್ಲಾ ಶಿಕ್ಷಕರಿಗೆ ಮಾಹಿತಿಯನ್ನು ಸುತ್ತೋಲೆಯನ್ನು ಹೊರಡಿಸು ವುದು,

ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು, ಇದಕ್ಕೆ ಪೂರಕವಾಗಿ ಸ್ಪಂದಿಸಿದ ಬಿಇಒ ಬಮ್ಮಕ್ಕ ನವರ ಕಚೇರಿ ಸಿಬ್ಬಂದಿಯನ್ನು ಕರೆದು ಸೂಚನೆ ನೀಡಿದರು ರಾಜ್ಯ ಪ್ರದಾನ ಕಾರ್ಯದರ್ಶಿ ಶಂಕರ್ ಘಟ್ಟಿ ಧಾರವಾಡ ತಾಲ್ಲೂಕು ಅದ್ಯಕ್ಷ ಕಾಶಪ್ಪ ದೊಡವಾಡ. ತಾಲ್ಲೂಕು ಕಾರ್ಯದರ್ಶಿ ಚಂದ್ರಶೇಖ ರ ತಿಗಡಿ ತಾಲ್ಲೂಕು ಖಜಾಂಚಿ ಚಿದಾನಂದ ಹೂಲಿ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ರಾಜ್ಯ ಗೌರವಾದ್ಯಕ್ಷರು ಎಲ್ ಐ ಲಕ್ಕಮ್ಮನವರ ಧಾರವಾಡ ಜಿಲ್ಲಾ ಅದ್ಯಕ್ಷ ಅಕ್ಬರಲಿ ಸೋಲಾಪುರ ಜಿಲ್ಲಾ ಪ್ರದಾನ ಕಾರ್ಯ ದರ್ಶಿ ರಾಜೀವಸಿಂಗ ಹಲವಾಯಿ ಇದ್ದರು.