ಧಾರವಾಡ –
ಧಾರವಾಡದಲ್ಲಿ ಜೋರಾಗಿದೆ ಶಿವನಾಟ – ಕಂಡ ಕಂಡಲ್ಲಿ ಜೋರಾಗಿ ನಡೆಯುತ್ತಿದೆ ಶಿವಸಂಚಾರ. ಇದೇನಿದು ಖಡಕ್ ಪೊಲೀಸ್ ಆಯುಕ್ತರೇ…..
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ರೇಣುಕಾ ಸುಕುಮಾರ ಬಂದ ಮೇಲೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ.ಆದರೂ ಕೂಡಾ ಅಲ್ಲಿ ಇಲ್ಲಿ ಕದ್ದು ಮುಚ್ಚಿ ಕೆಲವೊಂದಿಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.
ಇನ್ನೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ತಾವು ಆಯಿತು ತಮ್ಮ ಕೆಲಸ ಆಯಿತು ಎಂದಕೊಂಡು ಕರ್ತವ್ಯವನ್ನು ಮಾಡಬೇಕಾದ ಕೆಲ ಪೊಲೀಸರು ಕಂಡ ಕಂಡಲ್ಲಿ ಕೈ ಹಾಕುತ್ತಿದ್ದಾರೆ ಅವರಿವರ ಹೆಸರನ್ನು ಹೇಳಿ ಹಾಡು ಹಗಲೇ ವಸೂಲಿಯನ್ನು ಮಾಡುತ್ತಿದ್ದಾರೆ.ಹೌದು ಇದಕ್ಕೆ ಸಾಕ್ಷಿ ಧಾರವಾಡದ ಉಪನಗರ ಪೊಲೀಸ್ ಠಾಣೆ.
ಈ ಒಂದು ಠಾಣೆಗೆ ಏನೋ ಖಡಕ್ ಪೊಲೀಸ್ ಅಧಿಕಾರಿ ಬಂದಿದ್ದಾರೆ ಆದರೆ ಇವರ ಕೆಳಗೆ ಕೆಲಸ ಮಾಡುವ ಕೆಲವರು ಹಾಡು ಹಗಲೇ ಚಾರ್ಲಿ ಹೆಸರಿನಲ್ಲಿಯೇ ಬಿಂದಾಸ್ ಆಗಿ ವಸೂಲಿ ದಂಧೆ ಯಲ್ಲಿ ತೊಡಗಿದ್ದಾರೆ.ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶಿವನಾಟ ಜೋರಾಗಿದೆ. ಸರಿಯಾಗಿ ಡೂಟಿ ಮಾಡೊ ಎಂದರೆ ಅದನ್ನು ಬಿಟ್ಟು ಸಂಚಾರ ಮಾಡುತ್ತಾ ವಸೂಲಿ ಮಾಡಿ ಕೊಂಡು ತಿರುಗಾಡುತ್ತಿದ್ದಾನೆ ಈ ಪೊಲೀಸಪ್ಪ
ಅತಿಯಾದ ಈ ಒಂದು ವಸೂಲಿ ದಂಧೆಯಿಂದ ವ್ಯಾಪಾರಿಗಳು ಬೇಸತ್ತಿದ್ದಾರೆ.ಬೈಯುತ್ತಾ ಶಿವ ಪ್ರಸಾದವನ್ನು ಮುಟ್ಟಿಸುತ್ತಿದ್ದಾರೆ ಇನ್ನೂ ಠಾಣೆಯ ಇತರೆ ಸಿಬ್ಬಂದಿಗಳಿಗೂ ಕೂಡಾ ಹಣವನ್ನು ನೀಡುತ್ತಿರುವವರು ವಿಚಾರವನ್ನು ಗಮನಕ್ಕೆ ತಗೆದುಕೊಂಡು ಬಂದರು ಕೂಡಾ ಹೇಳಿದರು ಕೇಳಿದರು ಕೂಡಾ ಏನು ಪ್ರಯೋಜ ನವಿಲ್ಲ ನಾವೇನು ಮಾಡೊಕಾಗಲ್ಲ ಎನ್ನುತ್ತಾ ಮೌನವಾಗಿದ್ದಾರೆ.
ಶಿವನಾಟವನ್ನು ಧಾರವಾಡ ತುಂಬೆಲ್ಲಾ ಪೊಲೀಸರು ಹಣವನ್ನು ನೀಡುತ್ತಿರುವವರು ಮಾತನಾಡಿಕೊಳ್ಳುವಂತಾಗಿದ್ದು ಹೀಗಾಗಿ ಉಪನಗರ ಪೊಲೀಸ್ ಠಾಣೆಯಲ್ಲಿ ಖಡಕ್ ಚಾರ್ಲಿ ಅವರು ಇದನ್ನು ಇನ್ನಾದರೂ ಗಂಭೀ ರವಾಗಿ ತಗೆದುಕೊಂಡು ಜೋರಾಗಿರುವ ಶಿವಸಂಚಾರಕ್ಕೆ ಕಡಿವಾಣ ಹಾಕಬೇಕಿದೆ
ಇಲ್ಲವಾದರೆ ದಾಖಲೆ ಸಮೇತ ಸಾಕ್ಷಿಯಾಗಿ ನಿಮ್ಮ ಸುದ್ದಿ ಸಂತೆ ನಿರಂತರವಾಗಿ ವರದಿಯನ್ನು ನೀಡಲಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..