ಕಲಘಟಗಿ –
ಚುನಾವಣೆ ಯ ಹೊಸ್ತಿಲಲ್ಲಿ ಧಾರವಾಡ ಜಿಲ್ಲೆಯಲ್ಲಿ ಚುನಾವಣೆ ಯ ಅಖಾಡ ರಂಗೇ ರುತ್ತಿದ್ದು ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಸಭೆ ಸಮಾರಂಭ ಈಗಲೇ ಜೋರಾಗಿದೆ.ಒಂದು ಕಡೆಗೆ ಅವರ ಪತ್ನಿ ಅಖಾಡಕ್ಕೆ ಇಳಿದು ಅಲ್ಲಲ್ಲಿ ಸಭೆ ಮಾಡುತ್ತಾ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದರೆ ಇತ್ತ ನಾಗರಾಜ ಛಬ್ಬಿ ಕೂಡಾ ಸುತ್ತಾಡುತ್ತಿದ್ದಾರೆ
ತಾಲ್ಲೂಕಿನ ಹಲವು ಕಡೆಗಳಲ್ಲಿ ಬಿಡುವಿಲ್ಲದೇ ಸುತ್ತಾಡುತ್ತಿದ್ದಾರೆ.ತಮ್ಮ ಆಪ್ತರು ಬೆಂಬಲಿಗರೊಂ ದಿಗೆ ಈಗಲೇ ತಿರುಗಾಡುತ್ತಿದ್ದಾರೆ.ಪ್ರತಿ ಗ್ರಾಮಕ್ಕೆ ಹೋಗಿ ಗ್ರಾಮಸ್ಥರೊಂದಿಗೆ ಸಭೆ ಸಮಾರಂಭ ಮಾಡುತ್ತಾ ಸಮಸ್ಯೆ ಆಲಿಸುತ್ತಿದ್ದಾರೆ.
ಬೆಂಡಲಗಟ್ಟಿ ಗ್ರಾಮದಲ್ಲಿ ಸಭೆ ಮಾಡಿದ ನಾಗರಾಜ ಛಬ್ಬಿ ಅವರು ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿ ಸಮಸ್ಯೆ ಗಳನ್ನು ಆಲಿಸಿದರು.ಇದೇ ವೇಳೆ ಬರುವ ದಿನಗಳಲ್ಲಿ ನಿಮ್ಮ ಯಾವುದೇ ರೀತಿಯ ಸಮಸ್ಯೆ ಸಂಕಷ್ಟ ಕ್ಕೆ ಸ್ಪಂದಿಸಿ ಧ್ವನಿಯಾ ಗುವುದಾಗಿ ಹೇಳಿ ಬದಲಾವಣೆ ಮಾಡಿ ನಿಮ್ಮ ಸೇವೆಗೆ ಒಮ್ಮೆ ಅವಕಾಶ ನೀಡುವಂತೆ ಕೇಳಿ ಕೊಂಡರು