ಸಿಂಧನೂರು –

ಭಡ್ತಿ ವಿಚಾರದಲ್ಲಿ ಅನ್ಯಾಯವನ್ನು ಮಾಡುತ್ತಿರುವ ಇಲಾಖೆಯ ವಿರುದ್ದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಸೇವಾ ನಿರತ ಪದವೀದರ ಶಿಕ್ಷಕರು ಸಿಡಿದೆದ್ದಿದ್ದಾರೆ.ಹೌದು ಏನೇ ಲ್ಲಾ ಪದವಿ ಮುಗಿಸಿದರು ಕೂಡಾ ಸಧ್ಯ ಹಿಂಬಡ್ತಿ ನೀಡಿ ಅನ್ಯಾಯವಾಗುತ್ತಿರುವ ವಿಚಾರ ಕುರಿತಂತೆ ಅಸಮಧಾನಗೊಂಡಿದ್ದಾರೆ ಶಿಕ್ಷಕರು.

ಸಧ್ಯ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಪದವೀದರ ಶಿಕ್ಷಕರು ಕಾರ್ಯವನ್ನು ನಿರ್ವಹಿಸುತ್ತಿ ದ್ದಾರೆ.ಸೇವಾ ನಿರತ ಪದವೀದರ ಶಿಕ್ಷಕರು ಪ್ರಾಥ ಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿ ಸುತ್ತಿದ್ದು ಸಧ್ಯ ಇವರಿಗೆ ಹಿಂಬಡ್ತಿಯನ್ನು ನೀಡಲಾಗು ತ್ತಿದೆ. ಹೀಗಾಗಿ ಇದರಿಂದ ಅಸಮಾಧನಗೊಂಡಿರುವ ಪದವೀದರ ಶಿಕ್ಷಕರು 6 ,7,8 ನೇ ತರಗತಿ ಬಹಿಷ್ಕರಿ ಸಲು ನಿರ್ಧಾರವನ್ನು ಮಾಡಿದ್ದಾರೆ.

ಈಗಾಗಲೇ ಈಕುರಿತಂತೆ ಹಲವು ಬಾರಿ ಮನವಿ ನೀಡಿ ಬೇಡಿಕೆಗಳ ಈಡೇರಿಕೆಗೆ ಕುರಿತಂತೆ ಮನವಿ ಮಾಡಿದರು ಕೂಡಾ ಸ್ಪಂದಿಸದ ಹಿನ್ನಲೆಯಲ್ಲಿ ತಾವು ಬೋಧಿಸುವ ತರಗತಿಗಳನ್ನು ಬಹಿಷ್ಕಾರ ಮಾಡಲು ನಿರ್ಧಾರವನ್ನು ಮಾಡಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕರ್ನಾಟಕ ರಾಜ್ಯಸರ್ಕಾರಿ ಎನ್ ಪಿಎಸ್ ನೌಕರರ ಘಟಕದಿಂದ ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ಮನವಿಯನ್ನು ನೀಡಲಾಯಿತು. ತಾಲ್ಲೂ ಕಿನ ಪ್ರಾಥಮಿಕ ಶಾಲಾ ಶಿಕ್ಷಕರು 6,7 ಮತ್ತು 8 ನೇ ತರಗತಿಗಳಿಗೆ ಬೋಧಿಸುವುದನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಮನವಿ ಪತ್ರವನ್ನು ನೀಡಿದ ರು.ಇನ್ನೂ ಪ್ರಮುಖವಾಗಿ 2016 ಕ್ಕೆ ಮೊದಲು ನೇಮಕವಾದ ಶಿಕ್ಷಕರನ್ನು ಸರಕಾರ ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 7) ಎಂದು ನೇಮಕಾತಿ ಮಾಡಿಕೊಂಡಿದ್ದು. ನಂತರ 2016 ರಲ್ಲಿ ಸರಕಾರ ಏಕಾಏಕಿ ರಾಜ್ಯದ ಎಲ್ಲ ಶಿಕ್ಷಕರಿಗೆ ಹಿಂಬಡ್ತಿ ನೀಡಿ ಪ್ರಾಥಮಿಕ ಶಾಲಾ ಶಿಕ್ಷಕ (1 ರಿಂದ 5) ಎಂದು ಪರಿಗ ಣಿಸಿದೆ ಪದವಿ,ಸ್ನಾತಕೋತ್ತರ ಪದವಿ ಪೂರ್ಣಗೊಳಿ ಸಿರುವ ಶಿಕ್ಷಕರಿದ್ದರು ಸರಕಾರ ಯಾವುದನ್ನು ಪರಿಗ ಣಿಸದೆ 1 ರಿಂದ 5 ನೇ ತರಗತಿಗೆ ಸೀಮಿತಗೊಳಿಸಿದೆ.

ಹಾಗೇ C and R ರೂಲ್ಸ್ ತಿದ್ದುಪಡಿ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 7 ಎಂದು ಪರಿಗಣಿಸುವವರೆಗೂ ಶಿಕ್ಷಕರು ತರಗತಿ ಬಹಿಷ್ಕರಿ ಸಲು ನಿರ್ಧರಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಮಾತಾನಾಡಿ ಕೂಡಲೇ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯವನ್ನು ಮಾಡಿದರು. ಇನ್ನೂ ಇದೇ ವೇಳೆ NPS ಸಂಘದ ಜಿಲ್ಲಾ ಸಂಚಾಲಕ ಶಂಕರದೇವರು,NPS ಸಂಘದ ಅಧ್ಯಕ್ಷ ಮಂಜುನಾಥ, ನಿರ್ದೇಶಕರಾದ ಪಕೀರಗೌಡ,ಪರಪ್ಪ ಕರಿಗಾರ, ರವಿಕುಮಾರ್,ದುರುಗಪ್ಪ ಗುಡದೂರು, ಅಮರಯ್ಯ ಪತ್ರಿಮಠ, ಮೋಹನ ರಾಮಕೃಷ್ಣ ಚಂದ್ರು ,ಧಮ೯ರಾಜ್, ಸೇರಿದಂತೆ ಹಲವು ಪದವೀದರ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.