ಬೆಂಗಳೂರು –
ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ.ಈ ಒಂದು ಸಮಿತಿಯೂ ಕೂಡಾ ಈಗಾಗಲೇ ವೇತನ ರಚನೆ ಕುರಿತಂತೆ ಕೆಲವೊಂ ದಿಷ್ಟು ಕೆಲಸ ಕಾರ್ಯಗಳನ್ನು ಆರಂಭ ಮಾಡಿದೆ
ಮುಂದೆ ಬರುವ ಸಾಲು ಸಾಲು ಚುನಾವಣೆಗ ಳನ್ನು ಗಮನದಲ್ಲಿಟ್ಟುಕೊಂಡು ಸಮಿತಿಯೂ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿದೆ ಹೀಗಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಸಂಸತಗೊಂಡಿದ್ದು ಇದರ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಈಗ ಹೊಸದಾಗಿ ಕೆಲವೊಂ ದಿಷ್ಟು ಹೊಸ ಬೇಡಿಕೆಗಳ ಪಟ್ಟಿಯನ್ನು ಸಮಿತಿ ಮುಂದೆ ಇಟ್ಟಿದ್ದಾರೆ.
ಹೌದು ಮಲೆನಾಡಿನಲ್ಲಿ ಗಿರಿ ಭತ್ಯೆಗೆ ಕ್ರಮವನ್ನು ಕೈಗೊಳ್ಳಬೇಕು.ಅಲ್ಲದೇ ವೇತನ ಆಯೋಗದಲ್ಲಿ ಎಚ್.ಆರ್.ಎ ತಾರತಮ್ಯ ನಿವಾರಿಸಬೇಕು ಶಿಶು ಅಭಿವೃದ್ಧಿ ಇಲಾಖೆಯಲ್ಲಿ ₹ 14 ಲಕ್ಷ ವೇತನ ಪಾವತಿಯಾಗಿಲ್ಲದ ಬಗ್ಗೆಯೂ ಗಮನ ವನ್ನು ಹರಿಸುವಂತೆ ಒತ್ತಾಯವನ್ನು ಮಾಡಿದ್ದಾರೆ.
ಇದರೊಂದಿಗೆ ಗ್ರಾಮ ಸಹಾಯಕರು ಸಹಾಯಧನ ಹೆಚ್ಚಿಸಲು ಸಂಘಕ್ಕೆ ಮನವಿ ಮಾಡಿದ್ದು ಬೇಡಿಕೆಯನ್ನು ಸರ್ಕಾರದ ಮುಂದಿ ಡಲಾಗಿದ್ದು ಇದನ್ನು ಪರಿಗಣಿಸುವಂತೆ ಸಂಘವು ಒತ್ತಾಯವನ್ನು ಮಾಡಿದೆ.ಹಾಗೇ ಪ್ರಾಥಮಿಕ ಶಾಲಾ ಶಿಕ್ಷಕರು ಮಲೆನಾಡು ಭಾಗದಲ್ಲಿ ಗಿರಿ ಭತ್ಯೆ ಕೇಳಿದ್ದು ಅದನ್ನು ಕಲ್ಪಿಸಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಒತ್ತಾಯವನ್ನು ಮಾಡಿದ್ದಾರೆ.
ಒಟ್ಟಾರೆ ಈಗಷ್ಟೇ 7ನೇ ವೇತನ ಆಯೋಗಕ್ಕೆ ಅಧ್ಯಕ್ಷರನ್ನು ಸದಸ್ಯರನ್ನು ನೇಮಕ ಮಾಡಿದ್ದ ವರದಿಯನ್ನು ರಚನೆ ಮಾಡುವ ಮುನ್ನ ಸಮಿತಿಯ ಮುಂದೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಇಟ್ಟಿರುವ ಬೇಡಿಕೆಗಳನ್ನ ಈಡೇರಿಸು ವಂತೆ ಒತ್ತಾಯ ಕೇಳಿ ಬಂದಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ…..
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..