ಬೆಂಗಳೂರು –
ಸಧ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಶಿಕ್ಷಕರ ವರ್ಗಾವಣೆ ಕಾಯಿದೆ,ಇಲ್ಲವೇ ಸುಗ್ರಿವಾಜ್ಞೆ ತಗೆದುಕೊಂಡು ಬನ್ನಿ ಸ್ವಂತ ಜಿಲ್ಲೆಗೆ ವರ್ಗಾವಣೆ ಆದೇಶ ಹೊರಡಿಸಿ ಶಿಕ್ಷಕರು ರಿಗೆ ಅನುಕೂಲ ಮಾಡಿಕೊಡಿ ಎಂದು ರಾಜ್ಯ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡಪ್ಪ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ಯ ಮೂಲಕ ಒತ್ತಾಯಿಸಿದ ಅವರು ಈ ಮೂಲಕ ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕಳಕಳಿಯ ಮನವಿ ಏನಂದರೆ ನಡೆಯುತ್ತಿರುವ ಅಧಿವೇಶನದಲ್ಲಿ ಸ್ವಂತ ಜಿಲ್ಲೆಗೆ ವರ್ಗಾವಣೆ ಕಾಯಿದೆ ಸುಗ್ರೀವಾಜ್ಞೆ ಹೊರಡಿಸಿ ಹತ್ತು ಹದಿನೈದಿಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಅಂತಹ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ನೀಡಬೇಕೆಂದು ಆಗ್ರಹ ಮಾಡಿದರು

ಇನ್ನೂ ನೌಕರರ ಸಂಘದವರು ಶಿಕ್ಷಕರ ಸಂಘಟನೆಗಳು ಇದಕ್ಕೆ ಬೆಂಬಲವಾಗಿ ನಿಂತು ವರ್ಗಾವಣೆ ಇಲ್ಲದೆ ಕಂಗಾ ಲಾಗಿರುವ ಮಾನಸಿಕವಾಗಿ ದೈಹಿಕವಾಗಿ ತೊಂದರೆ ಅನುಭವಿಸುತ್ತಿರುವ ಶಿಕ್ಷಕರಿಗೆ ಸ್ಪಂದನೆ ನೀಡಬೇಕು ಶೈಕ್ಷಣಿಕ ಹಿತದೃಷ್ಟಿಯಿಂದ ಈ ಅಧಿವೇಶನದಲ್ಲಿಯೇ ವರ್ಗಾವಣೆ ಕಾಯ್ದೆ ಜಾರಿ ಮಾಡಲು ಎಲ್ಲರೂ ಸಹಾಯ ಮಾಡಬೇಕು ಸರ್ಕಾರಕ್ಕೆ ಒತ್ತಡ ಹಾಕಬೇಕೆಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡಪ್ಪ ಆಗ್ರಹಪಡಿಸಿದ್ದಾರೆ