ಶಿಕ್ಷಣ ಇಲಾಖೆಯಲ್ಲಿ OOD ಗದ್ದಲ ಒಬ್ಬರು ಮಂಜೂರು ಮಾಡಿದರು ಆಯುಕ್ತರು ರದ್ದು ಮಾಡಿ ನೀಡಿದರೆ ಸೂಕ್ತ ಕ್ರಮದ ಎಚ್ಚರಿಕೆ ನೀಡಿದರು

Suddi Sante Desk

ಬೆಂಗಳೂರು –

ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಕಾರ್ಯಕ್ರಮ ಮಾಡಲು ಶಿಕ್ಷಣ ಇಲಾಖೆಯ ಮಹಿಳಾ ಸಿಬ್ಬಂದಿ ಮತ್ತು ಶಿಕ್ಷಕಿಯರಿಗೆ ಕಾರ್ಯಕ್ರಮ ದಲ್ಲಿ ಪಾಲ್ಗೊ ಳ್ಳಲು OOD ರಜೆ ಯನ್ನು ನೀಡಲಾಗಿತ್ತು ಈ ಒಂದು ವಿಚಾರ ಕುರಿತು ರಾಜ್ಯದ ಕೆಲ DDPI ಅಧಿಕಾರಿಗಳು ಕೂಡಾ ಆದೇಶವನ್ನು ಮಾಡಿದ್ದರು

ಹೌದು ವಿಜಯಪುರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆ ಗಳಲ್ಲಿ ಆದೇಶವನ್ನು ಮಾಡಲಾಗಿತ್ತು ಈ ಒಂದು ಆದೇಶವು ವೈರಲ್ ಆಗಿದ್ದು ಸಿಕ್ಕಾಪಟ್ಟಿ ವೈರಲ್ ಬೆನ್ನಲ್ಲೇ ಇಲಾಖೆಯ ಆಯುಕ್ತರು ರಾಜ್ಯದ DDPI ಗಳು ಜಾರಿಗೆ ಮಾಡಿದ್ದ ಆದೇಶ ವನ್ನು ರದ್ದು ಮಾಡಿದ್ದಾರೆ

ಹೌದು ಈ ಒಂದು ಆದೇಶ ಹೋರಬೀಳುತ್ತಿದ್ದಂತೆ ಅತ್ತ ಇದನ್ನು ನೋಡಿದ ಆಯುಕ್ತರು ರದ್ದು ಮಾಡಿದ್ದಾರೆ ಶಾಲೆ ಗಳು ತಡವಾಗಿ ಆರಂಭವಾಗಿದ್ದು ಹೀಗಾಗಿ ದಿನಾಂಕ 08 ಮಾರ್ಚ 2022 ಮಂಗಳವಾರ ಮಹಿಳಾ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸಲು ನೀಡಿದ್ದ ಈ ಒಂದು ವಿಶೇಷ ರಜೆಯನ್ನು ರದ್ದು ಮಾಡಿದ್ದಾರೆ

ಮೊದಲು OOD ಆದೇಶ ಮಂಜೂರು ಆಗಿತ್ತು ಆದರೆ ಇಲಾಖೆಯ ಕಾರಣಾಂತರಗಳಿಂದ ಈಗ OOD ಆದೇಶ ರದ್ದಾಗಿದೆ.ಒಂದು ವೇಳೆ ನೀಡಿದ್ದೆ ಗಮನಕ್ಕೆ ಬಂದರೆ ಶಿಸ್ತು ಕ್ರಮವನ್ನು ಕೈಗೊಳ್ಳುವ ಮಾತನ್ನು ಪ್ರಾಥಮಿಕ ಶಾಲಾ ನಿರ್ದೇಶಕರು ಹೇಳಿದ್ದಾರೆ.ಇತ್ತ ಮಹಿಳೆಯರಿಗಾಗಿ ಇರುವ ಈ ದಿನವನ್ನು ನಾವು ಅತಿ ಉತ್ಸಾಹ ಹಾಗೂ ವಿಜೃಂಭಣೆ ಯಿಂದ ಆಚರಿಸುವ ಸಲುವಾಗಿ ನಾವೆಲ್ಲರೂ ನಮ್ಮ ಹಕ್ಕಿನ ಒಂದು ರಜೆಯನ್ನು ಹಾಕಿಕೊಂಡು ಬಂದು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಯಾಗಿ ಆಚರಿಸಿ ಈ ನಮ್ಮ ಶಕ್ತಿ,ಅಭಿಮಾನವನ್ನು ಪ್ರಜ್ವಲಿ ಸೋಣ.ಬನ್ನಿ ಎಲ್ಲರೂ ಭಾಗವಹಿಸೋಣ ಎಂದು ತಮ್ಮಲ್ಲಿ ಕಳಕಳಿಯ ವಿನಂತಿ ಎಂದು ಉಲ್ಲೇಖ ವನ್ನು ಮಾಡಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.