ಬೆಂಗಳೂರು –
ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಗೆ ಮತ್ತೆ ಐದಾ ರು ಶಿಕ್ಷಕರು ಸಾವಿಗೀಡಾಗಿದ್ದಾರೆ. ಹೌದು ಮಧ್ಯಾಹ್ನ ದ ನಂತರ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಐದಾರು ಜನ ಶಿಕ್ಷಕರು ಸಾವೀಗೀಡಾಗಿದ್ದು ಸಾಲು ಸಾಲಾಗಿ ರಾಜ್ಯದಲ್ಲಿ ಶಿಕ್ಷಕರು ಸಾವಿಗೀಡಾಗುತ್ತಿದ್ದರೂ ಕೂಡಾ ಶಿಕ್ಷಣ ಸಚಿವರು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಮಾತ್ರ ಮೌನವಾಗಿದೆ.

ಇನ್ನೂ ಮಧ್ಯಾಹ್ನದ ನಂತರ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕರ ಬಂಧಗಳ ಮಾಹಿತಿಯ ನ್ನು ನೋಡೊದಾದರೆ ವಿಜಯಪುರದ ತಿಕೋಟಾದ ಬಾಬಾನಗರದ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಮತಿ ಭಾರತಿ ಹಳ್ಳಿ ಎರಡು ದಿನಗಳ ಹಿಂದೆ ಸೋಂಕುಕಾಣಿಸಿಕೊಂಡಿತ್ತು ವಿಜಯಪುರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇನ್ನೂ ಇತ್ತ ಕೋಹಳ್ಳಿಯ ಮಾಣಿಕ್ಯ ಸರ್ಕಾರಿ ಪ್ರೌಢ ಶಾಲೆಯ ಜಾನವೆಸ್ಲಿ ರಾಹುತ್ ಇವರಿಗೂ ಕಳೆದ ವಾರ ಕೋವಿಡ್ ಸೋಂಕು ಕಾಣಸಿಕೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಂದು ಮಧ್ಯಾಹ್ನ ಸಾವಿಗೀಡಾಗಿದ್ದಾರೆ.

ಇತ್ತ ದೇವನಹಳ್ಳಿಯ ಪ್ರೌಢ ಶಾಲೆಯ ಶಿಕ್ಷಕಿ ಸೌಮ್ಯಾ ಡಿಕೆ ಇವರಿಗೂ ಸೋಂಕು ಕಾಣಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. 39 ವಯಸ್ಸಿನ ಶಿಕ್ಷಕಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಇದರೊಂದಿಗೆ ಸಿಂಧಗಿಯ ಬಿಇಓ ಕಚೇರಿಯಲ್ಲಿನ ಮ್ಯಾನೇಜರ್ ಆಗಿರುವ ಸಾಯಿ ಕಂದಕೂರು ಅವರು ಕೋವಿಡ್ ಗೆ ಬಲಿಯಾಗಿದ್ದಾರೆ.ಇಂಡಿಯ ನಿಂಬಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಿ ಆರ್ ಕಮತಗಿ ಇವರು ಕೂಡಾ ಕೋವಿಡ್ ಗೆ ಬಲಿಯಾಗಿದ್ದಾರೆ.

ವೇಣು ಗೋಪಾಲ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಗ್ಗಲಿ ಹುಂಡಿ ನ೦ಜನ ಗೂಡು ಇವರು ಕೂಡಾ ನಿಧನರಾ ಗಿದ್ದಾರೆ. ಇವರೊಂದಿಗೆ, ಶಿಕ್ಷಕ ಡಿ ಚಂದ್ರಮೋಹನ ಅವರು ಕೂಡಾ ಕೋವಿಡ್ ಗೆ ಬಲಿಯಾಗಿದ್ದಾರೆ.

ಇನ್ನೂ ಮೃತರಾದ ಶಿಕ್ಷಕರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ, ಲಕ್ಷ್ಮೀದೇ ವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣನ ವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನಮಂತಪ್ಪ ಬೂದಿಹಾಳ,ಕೆ ವಿ ಶ್ರೀಕಾಂತ್ ವೆಂಕಟೇಶ್ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತರ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಸೂಕ್ತ ಪರಿಹಾರ ನೀಡು ವಂತೆ ಒತ್ತಾಯವ ನ್ನು ಮಾಡಿದೆ.