ಶಿವಮೊಗ್ಗ –
ಸಾಲಬಾಧೆ ತಾಳಲಾರದೆ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಿಎಂ ಸ್ವಕ್ಷೇತ್ರದಲ್ಲಿ ರೈತನೋರ್ವನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಮಟ್ಟಿಕೋಟೆ ಎಂಬಾ ಗ್ರಾಮದಲ್ಲಿ ನಿನ್ನೆ ರಾತ್ರಿ ಅಶೋಕಪ್ಪ (41) ಎಂಬ ರೈತನೋರ್ವ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶುಂಠಿ ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ಆತ ಬೆಳೆದಿದ್ದ ಬಾಳೆ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ 4 ಎಕರೆ ಜಮೀನನ್ನು ಮಾರಿದ್ದ ಈತ ಅರ್ಧ ಎಕರೆಯಲ್ಲಿ ಸಾಗುವಳಿ ಮಾಡುತ್ತಿದ್ದನು. ಶಿಕಾರಿಪುರದ ಅರ್ಬನ್ ಬ್ಯಾಂಕಿನಲ್ಲಿ 8 ಲಕ್ಷ ಹಾಗೂ ಸ್ಥಳೀಯ ಶಿವ ಸಹಕಾರಿ ಬ್ಯಾಂಕಿನಿಂದ 2 ಲಕ್ಷ ಹಾಗೂ ಕೈ ಸಾಲ ಸೇರಿದಂತೆ ಬಡ್ಡಿ ಕಟ್ಟಲಾಗದ ದುಃಸ್ಥಿತಿಯಲ್ಲಿದ್ದ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಪತ್ನಿ ಹಾಗೂ 2 ಮಕ್ಕಳನ್ನು ಬಿಟ್ಟು ಆಗಲಿದ್ದು ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.