ಬೀಳಗಿ –
ರಾಜ್ಯದ ಪೊಲೀಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ದೊಡ್ಡ ಗಾಂಜಾ ಪ್ರಕರಣವನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸರು ಬೇಧಿಸಿದ್ದಾರೆ.ಹೌದು ಬರೊಬ್ಬರಿ 2 ಕ್ಟೀಂಟಾಲ್ ಗಾಂಜಾ ಪ್ರಕರಣವನ್ನು ಪತ್ತೆ ಮಾಡಿರುವ ಬೀಳಗಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ಮಾಡಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾವನ್ನು ಆರೋಪಿಗಳ ಸಮೇತವಾಗಿ ವಶಕ್ಕೆ ತಗೆದುಕೊಂಡು ಪ್ರಕರಣವನ್ನು ಬೇಧಿಸಿದ್ದಾರೆ.

ಹೌದು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಶೇಖರಣೆ ಮಾಡಿಟ್ಟಿದ್ದ ಗ್ರಾಮದ ಮೇಲೆ ಬೀಳಗಿ ಪೊಲೀ ಸರು ದಾಳಿ ಮಾಡಿ ಒರ್ವನನ್ನು ಬಂಧನ ಮಾಡಿದ್ದಾರೆ. ಗಾಂಜಾ ಗಿಡಗಳನ್ನು ಬೆಳೆದು ಇನ್ನೇನು ಮಾರಾಟ ಮಾಡ ಬೇಕು ಎಂದುಕೊಂಡು ಶೇಖರಣೆ ಮಾಡಿಟ್ಟಿದ್ದರು. ಮಾರಾಟ ಮಾಡಲು ಶೇಖರಣೆ ಮಾಡಿಟ್ಟಿದ್ದ ಕುರಿತಂತೆ ಅಪಾರ ಪ್ರಮಾಣದಲ್ಲಿನ ಗಾಂಜಾದ ಮಾಹಿತಿಯನ್ನು ಪಡೆದ ಬೀಳಗಿ ಪೊಲೀಸ್ ಠಾಣೆಯ ಇನ್ಸ್ಪೇಕ್ಟರ್ ಶಿವಾನಂದ ಕಮತಗಿ ನೇತ್ರತ್ವದಲ್ಲಿನ ಟೀಮ್ ಎಸ್ಪಿ ಮತ್ತು ಡಿಎಸ್ಪಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಒರ್ವನನ್ನು ಬಂಧನ ಮಾಡಿದ್ದಾರೆ.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಿದ್ದಾಪೂರ ಗ್ರಾಮದಲ್ಲಿ ಶೇಖರಣೆ ಮಾಡಿಟ್ಟಿದ್ದರು ಈ ಕುರಿತಂತೆ ಡೋಂಗ್ರಿಸಾಬ್ ಬಾಬಾ ಸಾಬ ಅರಮನಿ ಎಂಬುವನನ್ನು ಬಂಧನ ಮಾಡಲಾಗಿದೆ. ಬಂಧಿತನಿಂದ 2 ಕ್ಟೀಂಟಾಲ್ ಹಾಗೇ 15 ಲಕ್ಷ ರೂಪಾಯಿ ರೂಪಾಯಿ ಮೌಲ್ಯದ ದೊಡ್ಡ ಪ್ರಮಾಣದಲ್ಲಿನ ಗಾಂಜಾ ವನ್ನು ವಶಕ್ಕೆ ತಗೆದುಕೊಂಡಿದ್ದಾರೆ ಪೊಲೀಸರು.ಸಧ್ಯ ಇನ್ನೂ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿದ್ದಾರೆ.ಇನ್ನೂ ಈ ಒಂದು ಕಾರ್ಯಾಚರಣೆಯು ಇನ್ಸ್ಪೇಕ್ಟರ್ ಎಸ್ ಎಸ್ ಕಮತಗಿ ಸಿಬ್ಬಂದಿಗಳಾದ ಎಸ್ ಆರ್ ಹೊಕ್ರಾಣಿ,ಎಚ್ ಎಸ್ ಕರಿಗಾರ,ಎ ಆರ್ ತೇಲಿ,ಎಸ್ ಎಚ್ ದಳವಾಯಿ, ಆರ್ ಎಸ್ ಹೊಸಮನಿ,ಆರ್ ಎಸ್ ಅಕ್ಕಿಮರಡಿ,ವ್ಹಿ ಎಸ್ ಹಸರಡ್ಡಿ,ಎಸ್ ಡಿ ದಾಶ್ಯಾಳ,ಎಸ್ ಎಸ್ ಮೇಟಿ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಈ ಒಂದು ಬೀಳಗಿ ಪೊಲೀಸರ ಕಾರ್ಯಾವನ್ನು ಪೊಲೀಸ್ ಅಧೀಕ್ಷಕರು ಇವರು ಶ್ಳಾಘಿಸಿದ್ದಾರೆ.ಪ್ರಮುಖವಾಗಿ ಈವ ರೆಗೆ ಪೊಲೀಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ದೊಡ್ಡ ಪ್ರಮಾಣದಲ್ಲಿನ ಗಾಂಜಾ ಪ್ರಕರಣ ಇದಾಗಿದ್ದು ಬೀಳಗಿ ಪೊಲೀಸರು ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾ ರಿಗಳು ಶ್ಳಾಘಿಸಿದ್ದಾರೆ.