ಬೆಂಗಳೂರು –
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ವಂತಿಗೆ ಹಣದ ಕುರಿತು ರಾಜ್ಯದ ಶಿಕ್ಷಕರು ಪ್ರಶ್ನೆ ಮಾಡಿದ್ದಾರೆ ಹೌದು ಹಣದಲ್ಲಿ ತಾಲ್ಲೂಕು ಘಟಕಕ್ಕೆ ಮೋಸ ಮಾಡುತ್ತಿದ್ದಾರೆ ಕಟಾವನೆ ಆದ ವಂತಿಗೆ ಹಣದಲ್ಲಿ ತಾಲೂಕಿಗೆ ಕೇವಲ 75 ಕೊಡುತ್ತಿದ್ದಾರೆ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಒಬ್ಬ ಶಿಕ್ಷಕರ ಹಣ 200 ರೂಪಾಯಿ ತಾಲೂಕಿಗೆ 75 ರೂಪಾಯಿ ಜಿಲ್ಲೆಗೆ 50 ರೂಪಾಯಿ ರಾಜ್ಯಕ್ಕೆ 75 ರೂಪಾಯಿ ಜಮಾ ಆಗುತ್ತೆ
ಆದರೆ ನೌಕರರ ಸಂಘಕ್ಕೆ ಒಬ್ಬ ನೌಕರರ ಕೊಡುವ 200 ರೂಪಾಯಿ ಹಣದಲ್ಲಿ ತಾಲೂಕಿಗೆ 100 ರೂಪಾಯಿ ಜಿಲ್ಲೆಗೆ 50 ರೂಪಾಯಿ ರಾಜ್ಯಕ್ಕೆ 50 ರೂಪಾಯಿ ಜಮಾ ಆಗುತ್ತೆ.ಶಿಕ್ಷಕರ ಸಂಘ ಕೂಡ ತಾಲ್ಲೂಕು ಘಟಕಕ್ಕೆ 100 ರೂಪಾಯಿ ಕೊಡಲಿ ನೌಕರರ ಸಂಘ ಕೊಡುವಂತೆ
ನೌಕರರ ರಾಜ್ಯ ಸಂಘ ಕಳೆದ 5 ವರ್ಷದಲ್ಲಿ 26 ಕೋಟಿ ಹಣ ಉಳಿತಾಯ ಖಾತೆಯಲ್ಲಿ ಉಳಿಸಿತ್ತು.ನೌಕರರ ಸಂಘಕ್ಕಿಂತ ರಾಜ್ಯ ಸಂಘಕ್ಕೆ ಹೆಚ್ಚು ಪಡೆಯುವ ಶಿಕ್ಷಕರ ರಾಜ್ಯ ಸಂಘ ಕಳೆದ 4 ವರ್ಷದಲ್ಲಿ ಕನಿಷ್ಠ 2.5 ಕೋಟಿ ಗರಿಷ್ಠ 4 ಕೋಟಿ ಹಣ ಉಳಿಸಬಹುದಾಗಿತ್ತು.ಕಳೆದ 4 ವರ್ಷದಲ್ಲಿ ಎಷ್ಟು ಕೋಟಿ ಹಣ ಬಂಡಲ್ ಬಢಾಯಿ ಶಿಕ್ಷಕರ ರಾಜ್ಯ ಸಂಘದಲ್ಲಿ ಉಳಿದಿದೆ ಎನ್ನುವುದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಹೀಗೆ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಶಿಕ್ಷಕರು ಪ್ರಶ್ನೆ ಮಾಡಿ ಚರ್ಚೆ ಮಾಡ್ತಾ ಇದ್ದಾರೆ.
(ಮೇಲಿರುವ ಎಲ್ಲಾ ಅಂಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಶಿಕ್ಷಕರು ಉಲ್ಲೇಖ ಮಾಡಿರುವ ವಿಚಾರ ಗಳಾಗಿವೆ ಇದು ಸುದ್ದಿ ಸಂತೆಯ ಸ್ಪಷ್ಟನೆ)
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..