ಬೆಂಗಳೂರು –
ಫೆಬ್ರುವರಿ ಅಧಿವೇಶನದಲ್ಲಿ ಶಿಕ್ಷಕರ ಸ್ವಂತ ಜಿಲ್ಲೆಗೆ ಈ ಒಂದು ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತರುವಂತೆ ಶಿಕ್ಷಕರ ಸಂಘಟನೆಯ ಪರವಾಗಿ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಅವರು ಒತ್ತಾಯ ವನ್ನು ಮಾಡಿದ್ದಾರೆ.

ಹೌದು ಹಲವಾರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಸರಳೀಕರಣ ಮಾಡುತ್ತಿಲ್ಲ ಎಷ್ಟೋ ಶಿಕ್ಷಕರ ಕುಟುಂಬಗಳು ಬೀದಿಪಾಲಾಗಿವೆ ಇತ್ತೀಚಿಗೆ ನಡೆದ ವರ್ಗಾವಣೆಯಲ್ಲಿ ಹಲವಾರು ಅವೈಜ್ಞಾನಿಕ ನಿಯಮಗಳಿಂದ ವರ್ಗಾವಣೆ ಸಿಗದೆ ಶಿಕ್ಷಕರು ಕಣ್ಣೀರು ಹಾಕಿ ಹೋಗಿದ್ದಾರೆ ಸುಮಾರು ಶಿಕ್ಷಕರು ಹತ್ತು ಹದಿನೈದು ಇಪ್ಪತ್ತು ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅವರಿಗೆ ವರ್ಗಾವಣೆ ಭಾಗ್ಯವಿಲ್ಲ ಹೀಗಾಗಿ ಶಿಕ್ಷಕರಿಗೆ ಮಾನಸಿಕವಾಗಿ ದೈಹಿಕವಾಗಿ ನೆಮ್ಮದಿ ಇಲ್ಲದಂತಾಗಿದೆ ಅದಕ್ಕಾಗಿ ಸ್ವಂತ ಜಿಲ್ಲೆಗೆ ಒಮ್ಮೆ ವರ್ಗಾವಣೆ ನೀಡಬೇಕು ಈಗಾಗಲೇ ನೌಕರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಶಿಕ್ಷಕರ ಮಾಹಿತಿ ಸಂಗ್ರಹ ಮಾಡಿ ಅವರವರ ಜಿಲ್ಲೆಗೆ ಒಮ್ಮೆ ವರ್ಗಾವಣೆ ನೀಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಫೆಬ್ರುವರಿ ಅಧಿವೇಶನದಲ್ಲಿ ಕಾಯ್ದೆ ಜಾರಿಗೆ ತರುವುದಾಗಿ ಹೇಳಿದ್ದಾರೆ ಬೆಂಬಲವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಾಥ ಮಿಕ ಪ್ರೌಢ ಗ್ರಾಮೀಣ ಶಿಕ್ಷಕರ ಸಂಘಗಳು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ದೈಹಿಕ ಶಿಕ್ಷಕರ ಸಂಘ ಒತ್ತಡ ಹಾಕಿ ರಾಜ್ಯದ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಕಲ್ಪಿಸಬೇ ಕೆಂದು ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘರಾಜ್ಯಾಧ್ಯಕ್ಷ ಪವಾಡೆಪ್ಪ ಮನವಿ ಮಾಡಿಕೊಂಡಿದ್ದಾರೆ.