ಸರ್ಕಾರಿ ಶಾಲಾ ಉದ್ಘಾಟನಾ ಸಮಾರಂಭದಲ್ಲಿ ಕೋವಿಡ್ ನಿಯಮ ಮಾಯ – ರಾಜಕಾರಣಿ ಗಳಿಗೊಂದು ನ್ಯಾಯ ಶಿಕ್ಷಕರಿಗೆ ಒಂದು ನ್ಯಾಯ…..

Suddi Sante Desk

ಚಿಕ್ಕಬಳ್ಳಾಪುರ –

ಸರ್ಕಾರಿ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮಾಯ ವಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ಕಂಡು ಬಂದಿದೆ.

ಸರ್ಕಾರಿ ಮಾರ್ಗಸೂಚಿಗಳನ್ನು ಮರೆತ ಸಂಸದರು, ಶಾಸಕರರು ಸೇರಿದಂತೆ ಹಲವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲೆಯನ್ನು ಉದ್ಘಾಟಿಸಿದರು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯಲ್ಲಿ ಸರ್ಕಾರಿ ಶಾಲಾ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ದೈಹಿಕವಿಲ್ಲ ಅಂತರವಿಲ್ಲ ಮಾಸ್ಕ್ ನ್ನು ಮರೆತ ಜನರು ಹಾಗೇ ಪ್ರತಿನಿಧಿಗಳು ಈ ಒಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು

ನೂರಾರು ಶಾಲಾ ವಿಧ್ಯಾರ್ಥಿಗಳ ಮತ್ತು ಪೋಷಕ ರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಕಾರ್ಯಕ್ರಮದಲ್ಲಿ ಕೊರೋನಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ಕಂಡು ಬಂದಿತು

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮ್ಮುಖದಲ್ಲಿ ಈ ಒಂದು ಕಾರ್ಯಕ್ರಮ ನಡೆಯಿತು.ಸರ್ಕಾರಿ ಶಾಲಾ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೀಗೆ ಕಂಡು ಬಂದಿತು.ಸಂಸದ ಎ. ನಾರಾಯಣ ಸ್ವಾಮಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿ.ಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಸೇರಿ ಹಲವರು ಭಾಗಿಯಾಗಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.