This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

Education News

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ…..

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ…..
WhatsApp Group Join Now
Telegram Group Join Now

ಧಾರವಾಡ

ಧಾರವಾಡ ತಾಲೂಕಿನ ಮಮ್ಮಿಗಟ್ಟಿ ಲಮಾಣಿ ತಾಂಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಬೇಲೂರ ಕೈಗಾರಿಕಾ ಪ್ರದೇಶದ ಎಡಿಎಂ ಆಗ್ರೋ ಇಂಡಸ್ಟ್ರೀಸ್ ಇಂಡಿಯಾ ಕಂಪನಿಯವರ ಪ್ರಾಯೋಜಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮ ಜರುಗಿತು.

 

ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬಮ್ಮಕ್ಕನವರ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.ನಂತರ ಅವರು ಮಾತನಾಡಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಆಧುನಿಕ ಸೌಕರ್ಯಗಳನ್ನು ಬಳಸಿಕೊಂಡು ಇಂದು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು.  ಪ್ರಸ್ತುತ ಶಿಕ್ಷಣದಲ್ಲಿ ತಾಂತ್ರಿಕತೆ, ಕೌಶಲ್ಯ ಮತ್ತು  ಸಾಮಾಜಿಕ ಮಾಧ್ಯಮಗಳ ಪಾತ್ರ ಹೆಚ್ಚುತ್ತಿದೆ ಎಂದರು

 

ವಿದ್ಯಾರ್ಥಿಗಳು ಓದಿಗೆ ಅಗತ್ಯವಿರುವಷ್ಟು ಮಾತ್ರ ಸಾಮಾಜಿಕ ಮಾಧ್ಯಮಗಳ ಮೇಲೆ ಅವಲಂಬನೆ ಆಗಬೇಕು.ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಇಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು.ಶೈಕ್ಷಣಿಕ ಉನ್ನತಿಕರಣಕ್ಕೆ ನೆರವು ನೀಡಿದ ಎಡಿಎಂ ಆಗ್ರೋ ಕಂಪನಿಗೆ ಅವರು ಕೃತಜ್ಞತೆ  ತಿಳಿಸಿದರು.

 

ಎಡಿಎಂ ಆಗ್ರೋ ಇಂಡಸ್ಟ್ರೀಸ್ ಇಂಡಿಯಾ ಕಂಪನಿಯ ಮುಖ್ಯಸ್ಥ ಹೇಮಂತ್ ಕುಮಾರ್ ಸರಸ್ವತ್ ಅವರು ಮಾತನಾಡಿ ಎಡಿಎಂ ಕಂಪನಿ ಯಿಂದ ನೀಡಿರುವ ಶೈಕ್ಷಣಿಕ ಸಾಮಗ್ರಿಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಎಲ್ಲಾ ಮಕ್ಕಳು ಚೆನ್ನಾಗಿ ಕಲಿಯಬೇಕು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವೇ ಅಸ್ತ್ರ ಆದ್ದರಿಂದ ಉತ್ತಮ ಜ್ಞಾನವನ್ನು ಪಡೆದು ಅದನ್ನು ಸಮರ್ಪಕವಾಗಿ ಬಳಸಿಕೊಂಡು, ಜೀವನದಲ್ಲಿ ಉನ್ನತ ಹುದ್ದೆ,ಸ್ಥಾನಮಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

 

ಈ ಸಮಾಜದಲ್ಲಿ ತಾವು ಮಹಾನ್ ವ್ಯಕ್ತಿಗಳಾಗ ಬೇಕು ಮತ್ತು ಇಂಜಿನಿಯರ್,ಡಾಕ್ಟರ್ ಮುಂತಾದ ಮಹತ್ವದ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

 

ಕಂಪನಿಯ ವ್ಯವಸ್ಥಾಪಕ ಅನಿಲಕುಮಾರ್ ತೇರದಾಳ ಅವರು ಮಾತನಾಡಿ ಸ್ಮಾರ್ಟ್ ಕ್ಲಾಸ್ ಉದ್ದೇಶಗಳನ್ನು ತಿಳಿಸಿದರು.ಮತ್ತು ಸರಕಾರಿ ಶಾಲೆಗಳಲ್ಲಿ  ಹೆಚ್ಚಾಗಿ ಬಡವರ ಮತ್ತು ಕೂಲಿ ಕಾರ್ಮಿಕರ, ರೈತರ ಮಕ್ಕಳು ಓದುತ್ತಾರೆ.ಅವರ  ಓದಿನ ಹಸಿವು ಹೆಚ್ಚಿಸಲು ಮತ್ತು ಮಕ್ಕಳಿಗೆ ಹೊಸ ತಂತ್ರಜ್ಞಾನ ತಿಳಿಸಲು ಶಾಲೆಗೆ‌ ಸ್ಮಾರ್ಟ್ ಕ್ಲಾಸ್ ಸೌಲಭ್ಯ ನೀಡಲಾಗಿದೆ ಎಂದು ಅನಿಲ ಕುಮಾರ ತಿಳಿಸಿದರು.

 

ಇದೆ ಸಂದರ್ಭದಲ್ಲಿ ಇಂಜಿನಿಯರ್  ಬಸನಗೌಡ ಪಾಟೀಲ್ ರವರು ಶಾಲಾ ದತ್ತಿನಿಧಿಗೆ 5000 ಹಣವನ್ನು ನೀಡಿದರು.ಶಿಕ್ಷಕ ಗುರು ತಿಗಡಿ, ಶ್ರೀಕಾಂತ್ ಗಾಯಕವಾಡ  ಮಾತನಾಡಿದರು.ಶಾ ಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೃಷ್ಣ ಲಮಾಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

 

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ  ಉಮೇಶ್ ಬಮ್ಮಕ್ಕನವರ, ಎಡಿಎಮ್ ಕಂಪನಿ ಮುಖ್ಯಸ್ಥ  ಹೇಮಂತ್ ಕುಮಾರ್ ಸರಸ್ವತ್ ಸೇರಿದಂತೆ ಗಣ್ಯರನ್ನು ಸನ್ಮಾನಿಸಿ, ಗೌರವಿಸ ಲಾಯಿತು. ಶಾಲೆಯ ಪ್ರಧಾನ ಗುರುಗಳಾದ ಚಂದ್ರಶೇಖರ ತಿಗಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.ಶಿಕ್ಷಕರಾದ ವಿರುಪಾಕ್ಷಯ್ಯ ಕೊಪ್ಪಯ್ಯನರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ  ವಿಠ್ಠಲ್ ಭಟ್ಟಂಗಿ, ಸದಸ್ಯ ರಾದ  ಚಂದ್ರು ಕುಸಪ್ಪನವರ್,ಎ.ಡಿ.ಎಂ ಕಂಪನಿ ಫೈನಾನ್ಸ್ ಹೆಡ್  ರಾಧೇ ಶ್ಯಾಮ್,ದತ್ತಿದಾನಿ ಶಿವರುದ್ರಗೌಡ ಪಾಟೀಲ್,ಗ್ರಾಮದ ಹಿರಿಯ ರಾದ  ವೆಂಕಪ್ಪ ಲಮಾಣಿ, ಬಾಬು ಲಮಾಣಿ, ಗೋಪಾಲ ಲಮಾಣಿ, ಪರಶುರಾಮ ಲಮಾಣಿ ಬಸವರಾಜ ಲಮಾಣಿ,ಪಾರ್ವತಿ ಲಮಾಣಿ, ನೀಲವ್ವ ಉಪ್ಪಾರ, ಗಣೇಶ ಲಮಾಣಿ, ಸುನೀಲ ಲಮಾಣಿ,ಅಂಗನವಾಡಿ ಕಾರ್ಯಕರ್ತೆ ದೇವಕ್ಕ ಲಮಾಣಿ,  ಸೇರಿದಂತೆ ಎಸ್.ಡಿ.ಎಂ‌.ಸಿ ಸದಸ್ಯರು, ಶಿಕ್ಷಣ ಪ್ರೇಮಿಗಳು ಹಾಜರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk