ಬೆಂಗಳೂರು –
ಆರಂಭಗೊಂಡಿತು ಸಾರಿಗೆ ನೌಕರರ ಅನಿರ್ಧಿ ಷ್ಟಾವಧಿಯ ಹೋರಾಟ – ಸರಿ ಸಮಾನ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಧರಣಿ ಆರಂಭ ಮಾಡಿದ ಸಾರಿಗೆ ನೌಕರರು
ಸರ್ಕಾರಿ ನೌಕರರಂತೆ ನಮಗೂ ಕೂಡಾ ಸರಿ ಸಮಾನ ವೇತನ ಸೇರಿದಂತೆ ಹಲವು ಬೇಡಿಕೆಗ ಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಧರಣಿ ಆರಂಭ ಮಾಡಿದ್ದಾರೆ.ಹೌದು ಬೆಂಗಳೂರಿನಲ್ಲಿ ಈ ಒಂದು ಹೋರಾಟವನ್ನು ಆರಂಭ ಮಾಡಿರುವ ನೌಕರರು ಅನಿರ್ಧಿಷ್ಠಾ ವಧಿಯ ಧರಣಿಯನ್ನು ಕೈಗೊಂಡಿದ್ದಾರೆ.
ಪ್ರಮುಖವಾಗಿ ಸರ್ಕಾರಿ ನೌಕರರಂತೆ ನಮಗೂ ಕೂಡಾ ಸರಿ ಸಮಾನ ವೇತನ ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ 4 ಸಾರಿಗೆ ನಿಗಮಗಳ ಸಮಾನ ಮನಸ್ಕರ ವೇದಿಕೆ ಫ್ರೀಡಂ ಪಾರ್ಕ್ ನಲ್ಲಿ ಈ ಒಂದು ಅನಿರ್ದಿಷ್ಟಾವಧಿ ಧರಣಿಯನ್ನು ಆರಂಭಿಸಿದೆ.
ಸಾರಿಗೆ ನೌಕರರು ಈ ಹಿಂದೆ ನಡೆಸಿದ್ದ ಮುಷ್ಕರದ ವೇಳೆ ದಾಖಲಾದ ಪ್ರಕರಣಗಳನ್ನು ಈ ಕೂಡಲೇ ಹಿಂಪಡೆಯಬೇಕು.ಸರ್ಕಾರಿ ನೌಕರರ ರೀತಿ ಸಮಾನ ವೇತನ ಜಾರಿ ಮಾಡಬೇಕು ಎಂದು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ.
ಹೀಗಾಗಿ ಈ ಒಂದು ಹೋರಾಟವನ್ನು ಸಾರಿಗೆ ಇಲಾಖೆಯ ಸಮಾನ ಮನಸ್ಕರರು ಕೈಗೊಂಡಿ ದ್ದಾರೆ.ಬೇಡಿಕೆ ಈಡೇರಿಸುವ ಬಗ್ಗೆ ಸ್ಪಷ್ಟ ಭರವಸೆ ಸಿಗುವವರೆಗೆ ಹೋರಾಟ ಮುಂದುವರೆಸಲಾಗು ವುದು ಎಂದು ವೇದಿಕೆಯ ಮುಖಂಡರು ಹೇಳಿದ್ದಾರೆ
ಇನ್ನೂ 2020 ರ ಡಿಸೆಂಬರ್ ಮತ್ತು 2021ರ ಏಪ್ರಿಲ್ ನಲ್ಲಿ ಮುಷ್ಕರಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ವಿರುದ್ಧ ಕೈಗೊಂಡಿದ್ದ ಎಲ್ಲಾ ಶಿಸ್ತಿನ ಕ್ರಮ ಹಿಂಪಡೆಯಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಬಿ.ಎಸ್. ಸುರೇಶ್ ಆಗ್ರಹಿಸಿದ್ದು ಸರ್ಕಾರ ಸಾರಿಗೆ ಸಚಿವರು ಇದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬೊ ದನ್ನು ಕಾದು ನೋಡಬೇಕಿದೆ.
ಇನ್ನೂ ಸಾಂಕೇತಿಕವಾಗಿ ಆರಂಭಗೊಂಡಿರುವ ಈ ಒಂದು ಹೋರಾಟದಿಂದಾಗಿ ಸರ್ಕಾರ ಸ್ಪಂದಿಸಿ ದರೆ ಸರಿ ಇಲ್ಲವಾದರೆ ಬರುವ ದಿನಗಳಲ್ಲಿ ನೌಕರರು ದೊಡ್ಡ ಪ್ರಮಾಣದಲ್ಲಿ ಬೀದಿಗಿಳಿಯ ಲಿದ್ದು ಇದಕ್ಕೂ ಮುನ್ನು ಸಚಿವರು ಸರ್ಕಾರ ಸ್ಪಂದಿಸಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..