ಇಂಡಿ –
ಬೆಂಗಳೂರು ಚಲೋ ಹೋರಾಟದ ಸಿದ್ದತಾ ಸಭೆ ಮಾಡಿದ ಇಂಡಿ ಶಿಕ್ಷಕರು – ತಾಲ್ಲೂಕು ಅಧ್ಯಕ್ಷ ವಾಯ್ ಟಿ ಪಾಟೀಲ್ ರ ನೇತ್ರತ್ವದಲ್ಲಿ ನಡೆಯಿತು ಸಭೆ ಹಲವಾರು ವಿಷಯಗಳ ಕುರಿತಂತೆ ಚರ್ಚೆ
ಪಿಎಸ್ ಟಿ ಶಿಕ್ಷಕರ ಬೇಡಿಕೆಗಳ ಕುರಿತಂತೆ ಆಗಸ್ಟ್ 12 ರಂದು ಕರೆ ನೀಡಲಾಗಿರುವ ಬೆಂಗಳೂರು ಚಲೋ ಗೆ ಈಗಾಗಲೇ ರಾಜ್ಯದ ಮೂಲೆ ಮೂಲೆ ಗಳಿಂದ ಶಿಕ್ಷಕರು ಸಿದ್ದರಾಗುತ್ತಿದ್ದಾರೆ.ಶಿಕ್ಷಕರ ಬೇಡಿಕೆಗಳ ಕುರಿತಂತೆ ಶಿಕ್ಷಣ ಸಚಿವರು ಸಭೆ ಮಾಡಿದರು ಕೂಡಾ ಬೇಡಿಕೆಗಳ ಈಡೇರಿಕೆಗೆ ಸಚಿವರು ಸ್ಪಂದಿಸದ ಹಿನ್ನಲೆಯಲ್ಲಿ ಹೋರಾಟ ವನ್ನು ಮಾಡುವ ನಿರ್ಧಾರವನ್ನು ರಾಜ್ಯದ ಶಿಕ್ಷಕರ ತಗೆದುಕೊಂಡಿದ್ದು
ಈ ನಡುವೆ ಬೆಂಗಳೂರು ಚಲೋ ವಿಚಾರ ಕುರಿತಂತೆ ಇಂಡಿ ತಾಲ್ಲೂಕಿನ ಶಿಕ್ಷಕರು ತುರ್ತು ಸಭೆ ಮಾಡಿದರು. ಬೆಂಗಳೂರಿನಲ್ಲಿ ಹಮ್ಮಿಕೊಂಡಿ ರುವ ಫ್ರೀಡಂ ಪಾರ್ಕ್ ಬೆಂಗಳೂರು ಚಲೋ ಹೋರಾಟಕ್ಕೆ ಹೋಗಲು ಪೂರ್ವ ತಯಾರಿ ಯನ್ನು ಮಾಡಿಕೊಳ್ಳುತ್ತಿರುವ ಕುರಿತಂತೆ ಇಂಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಟೀಮ್ ಸಭೆ ಮಾಡಿ ಚರ್ಚೆಯನ್ನು ಮಾಡಿದರು.
ಪಿಎಸ್‌ಟಿ ಶಿಕ್ಷಕರಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಭಾಗವಹಿಸಲು ವಾಹನ ಗಳ ವ್ಯವಸ್ಥೆ ಸೇರಿದಂತೆ ಹಲವಾರು ವ್ಯವಸ್ಥೆ ಮತ್ತು ಇನ್ನಿತರ ಸೌಲಭ್ಯಗಳ ಕುರಿತಂತೆ ತಯಾರಿ ಯನ್ನು ಮಾಡಿಕೊಳ್ಳುತ್ತಿರುವ ಕುರಿತು ಸುದೀರ್ಘ ಚರ್ಚೆ ನಡೆಯಿತು.ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ವಾಯ್ ಟಿ ಪಾಟೀಲ್, ಪ್ರಧಾನ ಕಾರ್ಯ. ದರ್ಶಿಗಳದ ಅಲ್ತಾಫ್ ಬೋರಾಮಣಿ, ನಿಕಟ ಪೂರ್ವ ಅಧ್ಯಕ್ಷರಾದ ಎಸ್ ವಿ ಹರಾಳಯ್ಯ,
ಜಿ ಓ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಅಲ್ಲಾಬಕ್ಷ ವಾಲಿಕಾರ್, ಪಬ್ಬು ಚಾಂದಕವಟೆ, ಜಯರಾಮ್ ಚೌಹಾಣ, ಅಂಬರೀಶ್ ರಾಥೋಡ,ಕಾಂತು ಇಂಡಿ ಸುರೇಶ್ ಚೌಹಾಣ್, ಓಮರ್ ಶೇಕ್,ಅನೇಕ ಸಂಘದ ಸದಸ್ಯರು ಇದ್ದರು.ವಿಜಯಪುರ ಡಿಡಿಪಿಐ ಕಚೇರಿಯಲ್ಲಿ ಈ ಒಂದು ತುರ್ತು ಸಭೆ ನಡೆಯಿತು.
ಸುದ್ದಿ ಸಂತೆ ನ್ಯೂಸ್ ಇಂಡಿ…..