ತುಮಕೂರು –
ಕೋವಿಡ್ ವಾರ್ಡ್ ನಲ್ಲಿ ಸೋಂಕಿತರ ಹಾಡು ಉಲ್ಲಾಸ ಜೋರಾಗಿದೆ.ಹೌದು ಸಾಮಾನ್ಯವಾಗಿ ಯಾರೇ ಆಗಲಿ ಕರೋನ ಅಂದರೆ ಬೆಚ್ಚಿ ಬೀಳುವಂ ತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇಂತಹ ಪರಿಸ್ಥಿತಿ ಯಲ್ಲಿ ತುಮಕೂರಿನಲ್ಲಿ ಕೋವಿಡ್ ವಾರ್ಡ್ ನಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ

ಹೌದು ತುಮಕೂರು ಕೋವಿಡ್ ವಾರ್ಡ್ ನಲ್ಲಿ ಇ ಒಂದು ಚಿತ್ರಣ ಸನ್ನಿವೇಶ ಕಂಡು ಬಂದಿದೆ.ಚಿಕಿತ್ಸೆ ಗೆ ಆಸ್ಪತ್ರೆಗೆ ಬಂದ ರೋಗಿಗಳ ಮನಸ್ಸಿನ ಭಾವನೆಗಳ ನ್ನು ಬದಲಾವಣೆ ಮಾಡುವ ಉದ್ದೇಶದಿಂದ ಈ ಒಂದು ಪ್ಲಾನ್ ಮಾಡಲಾಗಿದೆ

‘ಒಂದಾಗಿದ್ದರೆ ಎಲ್ಲಾ ‘ ಹಾಡಿಗೆ ನೃತ್ಯವನ್ನು ಮಾಡಲಾಗಿದೆ. ವಾರ್ಡ್ ನಲ್ಲಿ ನರ್ಸ್ ಸಿಬ್ಬಂದಿ ಗಳು ನೃತ್ಯ ಮಾಡಿದರೆ ಇನ್ನೂ ಇತ್ತ ಬೆಡ್ ಮೇಲೆ ಕುಳಿತ ಜಾಗದಲ್ಲೇ ಕೈ ದೇಹ ಅಲುಗಾಡಿಸುತ್ತಾ ನೃತ್ಯಕ್ಕೆ ಸಾಥ್ ನೀಡಿದರು

ವಾರ್ಡ್ ನರ್ಸ್ ರಿಂದ ನೃತ್ಯ ಆರಂಭವಾಗಿದ್ದುನೃತ್ಯಕ್ಕೆ ಹೆಜ್ಜೆಹಾಕಿದ್ದಾರೆ ಆಕ್ಸಿಜನ್ ವಾರ್ಡ್ ನ ಕೋವಿಡ್ ರೋಗಿಗಳು.ರೋಗಿಗಳ ಮಾನಸಿಕ ಖಿನ್ನತೆ ಕಡಿಮೆ ಮಾಡಲು ಉದ್ದೇಶದಿಂದ ಈ ಒಂದು ನೃತ್ಯ ಆಯೋಜನೆ ಮಾಡಲಾಗಿದೆ
ಬೆಡ್ ನಲ್ಲಿ ಕುಳಿತೇ ಹಾಡಿಗೆ ಸಾಥ್ ನೀಡಿದ್ದಾರೆ ರೋಗಿಗಳು.ಜಿಲ್ಲಾಸ್ಪತ್ರೆಯ ಐಸಿಯು ವಿನಲ್ಲಿ ಈ ಒಂದು ಸಂತಸದ ವಾತಾವರಣ ಕಂಡು ಬಂದಿತು