ಬೆಂಗಳೂರು –
ಕೊನೆಗೂ ವರ್ಗಾವಣೆಗೆ ತಡೆಯಾಜ್ಞೆಯನ್ನು ತರಲಾಗಿದೆ.ಹೌದು ಈಗಾಗಲೇ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳ ಲಾಗಿದೆ.ಇನ್ನೇನು ಒಂದೇ ವಾರ ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ವರ್ಗಾವಣೆ ನಡೆಯುತ್ತಿತ್ತು ಆರಂಭವಾಗುತ್ತಿತ್ತು ಆದರೆ ವರ್ಗಾವಣೆ ಆರಂಭ ವಾಗುವ ಮುನ್ನೇ ಈ ಒಂದು ವರ್ಗಾವಣೆ ಪ್ರಕ್ರಿ ಯೆಗೆ ತಡೆಯಾಜ್ಞೆಯನ್ನು ತರಲಾಗಿದೆ.ಹೌದು 29 -06 -2021 ರ ಮಾರ್ಗಸೂಚಿಯಂತೆ ಇದೇ ಸೆಪ್ಟೆಂಬರ್ 15 ರಂದು ನಡೆಯಬೇಕಿದ್ದ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಮುಂದಿನ ವಿಚಾರಣೆ ಅಂದರೆ ಸೆಪ್ಟೆಂಬರ್ 27 ವರೆಗೂ ಮಾತ್ರ ನಡೆಸದಂತೆ KAT ತಡೆಯಾಜ್ಞೆ ಯನ್ನು ನೀಡಿದೆ.
ನಿನ್ನೇಯಿಂದ ವರ್ಗಾವಣೆ ಕುರಿತಂತೆ ತಡೆಯಾಜ್ಞೆ ಬಂದಿದೆ ಎಂಬ ಚರ್ಚೆ ಸಾಮಾಜಿಕ ಜಾಲ ತಾಣ ಗಳಲ್ಲಿ ನಡೆಯುತ್ತಿತ್ತು ಇವೆಲ್ಲದರ ನಡುವೆ ಈಗ ಆದೇಶ ಪ್ರತಿಯೊಂದು ಹೊರ ಬಿದ್ದಿದ್ದು ಹೀಗಾಗಿ ಈ ಒಂದು ವರ್ಗಾವಣೆಗೆ ತಡೆಯಾಜ್ಞೆ ಬಂದಿದ್ದು ಹೇಗಾದರೂ ಮಾಡಿ ವರ್ಗಾವಣೆ ನಡೆಯುತ್ತದೆ ಆರಂಭವಾಗುತ್ತದೆ ನಮಗೂ ವರ್ಗಾವಣೆ ಭಾಗ್ಯ ಸಿಗುತ್ತದೆ ಅಂದುಕೊಳ್ಳಲಾಗಿತ್ತು ಜೊತೆಗೆ ಈ ಹಿಂದೆ ಒಂದು ತಿಂಗಳಲ್ಲಿ ವರ್ಗಾವಣೆ ಮಾಡಿದ ಉದಾಹ ರಣೆಗಳಿದ್ದರೂ ಕೂಡಾ ಒಂದು ವರ್ಷದ ಯೋಜನೆ ಮಾಡಿ ಶಿಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದರು.
ಸಧ್ಯ ಇವೆಲ್ಲದರ ನಡುವೆ ಅವೈಜ್ಞಾನಿಕವಾದ ಈ ಒಂದು ನೀತಿಯಿಂದಾಗಿ ಯಾರಿಗೂ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ನೀತಿಯಿಂದಾಗಿ ನಾಡಿನ ಶಿಕ್ಷಕರು ಬೇಸತ್ತಿದ್ದು ಇವೆಲ್ಲದರ ನಡುವೆ ಎರಡು ವರ್ಷಗಳ ನಂತರ ವರ್ಗಾವಣೆ ನಡೆಯುತ್ತದೆ ಎಂದುಕೊಂಡಿದ್ದ ಶಿಕ್ಷಕರಿಗೆ ಸಧ್ಯ ನ್ಯಾಯಾಲಯದ ತಡೆಯಾಜ್ಞೆಯ ಸಂದೇಶ ದೊಡ್ಡ ಆತಂಕವನ್ನುಂಟು ಮಾಡಿದೆ.2016 ರಲ್ಲಿನ ಹೆಚ್ಚುವರಿ ಶಿಕ್ಷಕರು ನ್ಯಾಯಾಲಾಯದ ಮೆಟ್ಟಿಲು ಹತ್ತಿ ಈ ಒಂದು ಪ್ರಕ್ರಿಯೆಗೆ ತಡೆಯಾಜ್ಞೆಯನ್ನು ತಗೆದುಕೊಂಡು ಬಂದಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.