ಬೆಂಗಳೂರು –
ಶಿಕ್ಷಕರ ವರ್ಗಾವಣೆಯಲ್ಲಿ ಅನ್ಯಾಯ ವಿಚಾರ ಕುರಿತು ಕೆಲ ಶಿಕ್ಷಕರು ವರ್ಗಾವಣೆ ಪ್ರಕ್ರಿಯೆ ಪ್ರಶ್ನಿಸಿ ಕೆ.ಎ.ಟಿ ಗೆ ಅರ್ಜಿ ಸಲ್ಲಿಸಿದ್ದರು.ಕಳೆದ ವಾರವಷ್ಟೇ ಅರ್ಜಿ ಸಲ್ಲಿಸಿದ್ದರು ಇಂದು ವಿಚಾರಣೆ ಆರಂಭಿಸಿದ ನ್ಯಾಯಾಲಯ ಪ್ರಕ್ರಿಯೆ ಗೆ ತಡೆಯಾಜ್ಞೆ ಯನ್ನು ನೀಡಿದೆ.ಹೌದು ಇಂದು ನೀಡಿರುವ ತೀರ್ಪಿನ ಆದೇಶದಂತೆ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿರುವ ಕಾರಣ ನಾಳೆ ನಡೆಯುವ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯುವುದಿಲ್ಲ ಹಾಗೂ ವೇಳಾಪಟ್ಟಿಯಂತೆ 20.12.21 ರಿಂದ ನಡೆಯಬೇಕಿದ್ದ ಪ್ರೌಢಶಾಲಾ ಶಿಕ್ಷಕರ ಕೌನ್ಸಿಲಿಂಗ್ ಕೂಡ ನಡೆಯುವುದಿಲ್ಲ ಎಂದು ಮೈಸೂರು ವಿಭಾಗದ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ ಇನ್ನೂ ಎಂಟು ಜಿಲ್ಲೆಯ ಉಪನಿರ್ದೇಶಕರು ಈ ಬಗ್ಗೆ ಸಂಬಂಧಿಸಿದ ಶಿಕ್ಷಕರಿಗೆ ಮಾಹಿತಿ ನೀಡಲು ತಿಳಿಸಿದ್ದಾರೆ
ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಜಂಟಿ ನಿರ್ದೇಶ ಕರು ಮೈಸೂರು ವಿಭಾಗ ಮೈಸೂರು ಹಾಗೂ ಮೈಸೂರು ವಿಭಾಗದ ಎಲ್ಲಾ ಉಪನಿದೇಶಕರು ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ದಿನಾಂಕ 18/ 12/ 2021 ರಂದು ಇದ್ದಂತ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂ ಗ್ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಮುಂದೂ ಡಲಾಗಿದೆ. ಈ ಮಾಹಿತಿಯನ್ನು ನಿಮ್ಮಜಿಲ್ಲಾ ಶಿಕ್ಷಕ ವೃಂದಕ್ಕೆ ವ್ಯಾಪಕ ಪ್ರಚಾರ ಪಡಿಸಲು ಕೋರಿದೆ ಎಂದು ಸಂದೇಶ ವೊಂದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದ್ದಾರೆ