ಬೆಂಗಳೂರು –
ಮಹಾಮಾರಿ ಕೊರೋನಾ ಇಡೀ ದೇಶದಲ್ಲಿ ಹಲವ ರ ಜೀವನ ಕಸಿದುಕೊಂಡಿದ್ದು ಇದಕ್ಕೆ ವಿದ್ಯಾರ್ಥಿಗಳು ಕೂಡಾ ಹೊರತಾಗಿಲ್ಲ.ಕಳೆದ ವರ್ಷದಿಂದ ಆರಂಭ ಗೊಂಡ ನರಕಯಾತನೆಯ ಬದುಕು ಮುಗಿದು ಇನ್ನೇ ನು ಎಲ್ಲವು ಮುಗಿದು ಸರಿಯಾಯಿತು ಎಂದುಕೊ ಳ್ಳುವಷ್ಟರಲ್ಲಿ ಮತ್ತೆ ಅದೇ ಪರಿಸ್ಥಿತಿ ಅದೇ ರೀತಿ ಭವಿಷ್ಯ ಕ್ಕೇ ಮಾರಕವಾಗಿದೆ.ಹೌದು ಈಗಾಗಲೇ ಆನ್ ಲೈನ್ ಕ್ಲಾಸ್ ನಲ್ಲಿ ಪಾಠ ಮುಗಿಸಿ ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಕೊರೋನಾ ಅಲೆ ಮತ್ತೆ ಶಾಕ್ ನೀಡಿದೆ.

ಹೌದು ರಾಜ್ಯ ಸರ್ಕಾರ ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೋವಿಡ್ ಹೆಚ್ಚ ಳದ ಹಿನ್ನಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿ ದೆ.ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ ನಿಜ ಆದರೆ ಇದ ರಿಂದಾಗಿ ಈಗಾಗಲೇ ಪರೀಕ್ಷೆಗೆ ಓದಿ ಮುಗಿಸಿದ ವಿದ್ಯಾರ್ಥಿಗಳ ಕತೆ ಪರಿಸ್ಥಿತಿ ಮಾತ್ರ ಅತಂತ್ರವಾಗಿದೆ.

ಮುಂದೆ ಯಾವಾಗ ಪರೀಕ್ಷೆ ನಡೆಯುತ್ತದೋ ಎಂಬ ದೊಡ್ಡ ಚಿಂತೆಯಲ್ಲಿ ನಾಡಿನ SSLC PUC ಮಕ್ಕಳಿ ದ್ದಾರೆ.ಇದ್ದಕ್ಕಿದ್ದಂತೆ ಪರೀಕ್ಷೆ ದಿನಾಂಕ ಘೋಷಿಸಿದರೆ ಈಗ ಓದಿದ್ದು ತರಗತಿಯಲ್ಲಿ ಹೇಳಿದ ವಿಚಾರಗಳು ತಲೆಯಲ್ಲಿರುತ್ತದೋ ಇಲ್ಲವೋ ಗೊತ್ತಿಲ್ಲ ಎಂಬ ದೊಡ್ಡ ಆತಂಕದಲ್ಲಿ ಮಕ್ಕಳಿದ್ದಾರೆ

ಇದು ನಿಜವಾಗಿಯೂ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅದರಲ್ಲೂ ಅವರ ಭವಿಷ್ಯಕ್ಕೆ ಬುನಾದಿಯಾ ಗಿರುವ ಎರಡು ಪ್ರಮುಖ ಪರೀಕ್ಷೆ ಗಳ ಅಂಕದ ಮೇಲೆ ಪರಿಣಾಮ ಬೀರಲಿದೆ

ಇದೊಂದು ದೊಡ್ಡ ಪ್ರಮಾಣದ ಸಮಸ್ಯೆಯಾಗಿದ್ದು ಭವಿಷ್ಯದ ಬಗ್ಗೆ ಏನೇನೋ ಕನಸು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳಿಗೆ ಈ ನಿರ್ಣಾಯಕ ಘಟ್ಟದಲ್ಲಿ ತುಂಬಾ ತೊಂದರೆಯಾಗಲಿದೆ

ಹೀಗಾಗಿ ರಾಜ್ಯ ಸರ್ಕಾರ ಅದರಲ್ಲೂ ಶಿಕ್ಷಣ ಸಚಿವ ರು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಆದರೆ ಪ್ರಮು ಖವಾಗಿ ಒಂದು ವೇಳೆ ಪರೀಕ್ಷೆ ಬರೆಯುವುದಾದರೆ ಹೇಗೆ ಇನ್ನೂ ಎಷ್ಟಂತ ಓದಬೇಕು ನೆನಪು ಇಟ್ಟುಕೊ ಳ್ಳಬೇಕು ಎಂಬ ಒಂದು ಚಿಂತೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿದ್ದಾರೆ

ಇನ್ನಾದರೂ ಎಲ್ಲವನ್ನೂ ಲಕ್ಷ್ಯವನ್ನು ಮುಂದಿಟ್ಟು ಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಚಿವರು ಸೂಕ್ತವಾದ ನಿರ್ಧಾರವನ್ನು ತಗೆದುಕೊ ಳ್ಳಬೇಕಿದೆ ಇಲ್ಲವಾದರೆ ಇನ್ನೂ ಎಷ್ಟೋಂದು ದಿನ ಕಾಯಬೇಕು ಇದಕ್ಕೆ ಅವರೇ ಉತ್ತರಿಸಬೇಕು