ಕಲಬುರಗಿ –
ಹೌದು ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಮತ್ತು ಅವರ ಪತ್ನಿ ಸಾವಿಗೀಡಾಗಿದ್ದಾರೆ.ಕಲಬುರಗಿ ಯ ನೇಲೋಗಿ ಕ್ರಾಸ್ ಬಳಿ ಈ ಒಂದು ಭೀಕರ ರಸ್ತೆ ಅಪಘಾತ ವಾಗಿದ್ದು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೇಲೋಗಿ ಕ್ರಾಸ್ ನಿಂತಿದ್ದ ಕಂಟೇನರ್‌ಗೆ ಮಾರುತಿ ಸ್ವೀಫ್ಟ್ ಡಿಸೈರ್ ಕಾರು ಡಿಕ್ಕಿಯಾಗಿದೆ.
ಇನ್ನೂ ಸ್ಥಳದಲ್ಲೆ ವಿಜಯಪುರ ಜಿಲ್ಲೆ ಸಿಂದಗಿ ಸಿಪಿಐ ಹಾಗೂ ಪತ್ನಿ ದುರ್ಮರಣ ರವಿ ಉಕ್ಕುಂದ (43) ಹಾಗೂ ಪತ್ನಿ ಮಧು ಪತ್ನಿ (40) ಸ್ಥಳದಲ್ಲೆ ದುರ್ಮರಣವಾಗಿದ್ದಾರೆ.ಸಿಂದಗಿಯಿಂದ ಕಲಬುರಗಿ ನಗರಕ್ಕೆ ಆಗಮಿಸುತ್ತಿದ್ದರು ಸಿಪಿಐ ದಂಪತಿ.ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಮುಂಭಾಗ ಕಂಟೇನರ್ ಹಿಂದೆ ಒಳಗೆ ನುಗ್ದಿದೆ.
ನುಜ್ಜುಗುಜ್ಜಾಗಿದೆ.ಇನ್ನೂ ಇತ್ತ ಈ ಒಂದು ಸುದ್ದಿಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಆಗಮಿಸಿದ್ದು ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.