ಬೆಂಗಳೂರು –
ಗ್ಯಾಸ್ ಪೈಪ್ ಲೈನ್ ಗೆ ರಸ್ತೆ ಬದಿಯಲ್ಲಿ ಕೆಲಸ ಮಾಡಲು ಮಂಜೂರಾದ ಯೋಜನೆಗೆ ರಸ್ತೆ ಬದಿ ಅಗೆಯಲು GAIL ಕಂಪನಿ ಅಧಿಕಾರಿಗಳು.ಸಿಬ್ಬಂದಿ ಮುಂದಾಗಿದ್ದರು.ರಸ್ತೆ ಬದಿ ಅಗೆದು ಕೆಲಸ ಮಾಡಲು ಸಂಚಾರಿ ಪೊಲೀಸರ ಅನುಮತಿ ಸಹ ಪಡೆಯಬೇಕಿತ್ತು.ಅದಕ್ಕೆ ಅನುಮತಿ ನೀಡಲು ಇಪ್ಪತ್ತು ಸಾವಿರ ಲಂಚ ಕೇಳಿದ್ದರು ಮಹಿಳಾ ಇನ್ಸ್ಪೆಕ್ಟರ್ ಹಂಸವೇಣಿ.ಲಂಚಕ್ಕೆ ಬೇಡಿಕೆಯಿಟ್ಟಿದ್ದ ಟ್ರಾಫಿಕ್ ಇನ್ಸ್‌ಪೆಕ್ಟರ್ ಲಂಚ ಸ್ವೀಕರಿಸುತ್ತಿದ್ದಾಗಲೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರಿನ ಚಿಕ್ಕಜಾಲ ಸಂಚಾರಿ ಇನ್ಸ್‌ಪೆಕ್ಟರ್ ಹಂಸ ವೇಣಿ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿ ದ್ದಿದ್ದಾರೆ.ಸರ್ಕಾರಿ ಸ್ವಾಮ್ಯದ GAIL ಕಂಪನಿ ಅಧಿಕಾರಿಗ ಳಿಂದ ಹಂಸವೇಣಿ ಲಂಚ ಸ್ವೀಕರಿಸ್ತಿದ್ದರು.ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.GAIL ಕಂಪನಿ ಅಧಿಕಾರಿಗಳು ಪೊಲೀಸರ ಲಂಚದ ಬಗ್ಗೆ ಎಸಿಬಿಗೆ ದೂರು ನೀಡಿದ್ದರು.ಇಂದು 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಸಂಚಾರಿ ಇನ್ಸ್ ಪೆಕ್ಟರ್ ಹಂಸವೇಣಿ ಅವರನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಅಗಿ ಲಾಕ್ ಮಾಡಿ ವಶಕ್ಕೆ ತಗೆದುಕೊಂಡು ಮುಂದಿನ ಕ್ರಮಗ ಳನ್ನು ಕೈಗೊಂಡಿದ್ದಾರೆ.