ತುಮಕೂರು –
ಬೈಕ್ ಸವಾರನ ಮೇಲೆ ಮಧುಗಿರಿ ಸಿಪಿಐ ಸರ್ದಾರ್ ದರ್ಪ ತೋರಿದ್ದಾರೆ.ನಡುರಸ್ತೆಯಲ್ಲೇ ಬೂಟು ಕಾಲಿನಿಂದ ಒದ್ದಿದ್ದಾರೆ ಸಿಪಿಐ ಸಾಹೇಬರು.

ಮಧುಗಿರಿ ಪಟ್ಟಣದ ನೃಪತುಂಗಾ ಸರ್ಕಲ್ ನಲ್ಲಿ ಈ ಒಂದು ಘಟನೆ ನಡೆದಿದೆ.ವಾಹನ ತಪಾಸಣೆ ನಡೆಸಿ ದಂಡ ಹಾಕುತ್ತಿದ್ದ ಸಿಪಿಐ ಸರ್ದಾರ್ ಅವರು ದಂಡ ಕಟ್ಟಡೇ ತಡ ಮಾಡಿದ ವಾಹನ ಸವಾರನಿಗೆ ಕಾಲಿನಿಂದ ಒದ್ದಿದ್ದಾರೆ ಸಿಪಿಐ ಅವರು.

ನೆಲಕ್ಕೆ ಬಿದ್ದ ವಾಹನ ಸವಾರನಿಗೆ ಅವಾಚ್ಯವಾಗಿ ನಿಂದಿಸಿ ಬೂಟು ಕಾಲಿನಲ್ಲಿ ಒದ್ದಿದ್ದಾರೆ.ಸಿಪಿಐ ದರ್ಪದ ಈ ಒಂದು ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.ಅಲ್ಲದೇ ಸಿಪಿಐ ಅಬ್ಬರಕ್ಕೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿ ದ್ದಾರೆ.

ಬೈಕ್ ಸವಾರರಿಗೆ ಕೆಟ್ಟಪದಗಳಲ್ಲಿ ನಿಂದಿಸೋ ಆರೋಪ ಕೂಡಾ ಕೇಳಿ ಬಂದಿದೆ.ಸಧ್ಯ ವಿಡಿಯೋ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದೆ.
ಕಳೆದ ಹಲವಾರು ದಿನಗಳಿಂದ ಸಿಪಿಐ ಸಾಹೇಬರ ವರ್ತನೆಯಿಂದ ಬೇಸತ್ತಿದ್ದಾರಂತೆ ಮಧುಗಿರಿ ಸಾರ್ವಜನಿಕರು.ಏನೇ ಆಗಲಿ ದಂಡ ಕಟ್ಟಲಿಲ್ಲ ಅಂದರೆ ಬೈಕ್ ಸವಾರನಿಗೆ ಹೀಗೆ ಮಾಡಿದ್ದು ಖಂಡಿತವಾಗಿಯೂ ತಪ್ಪು.