ಜಮ್ಮು ಕಾಶ್ಮೀರ –
ಡ್ರಗ್ಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಇಟ್ಟುಕೊಂಡು ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ ಮತ್ತು ಸದಾ ಅಮರಾಪೂರ ಅವರ ಸೈಕಲ್ ಯಾತ್ರೆ ಆರಂಭವಾಗಿದೆ.
ಹೌದು ದೇಶದಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿರುವ ಡ್ರಗ್ಸ್ ಕುರಿತು ಸಮಾಜದಲ್ಲಿ ತಿಳುವಳಿಕೆ ಮೂಡಿಸಿವ ಉದ್ದೇಶದಿಂದ ಈ ಒಂದು ಸೈಕಲ್ ಯಾತ್ರೆಯನ್ನು ಆರಂಭ ಮಾಡಿದ್ದಾರೆ
ಹೌದು ಸೈಕಲ್ ಯಾತ್ರೆಯ ಮುನ್ನ ಜಮ್ಮು ಕಾಶ್ಮೀರದಲ್ಲಿ ವೈಷ್ಟೋದೇವಿಯ ದರ್ಶನ ವನ್ನು ಮಾಡಿಕೊಂಡರು ವಿಶೇಷವಾದ ಪೂಜೆ ಮಾಡಿ ನಂತರ ಸೈಕಲ್ ಯಾತ್ರೆ ಆರಂಭ ಮಾಡಿದರು.
ಕಾಶ್ಮೀರದ ಕಟ್ರಾ ವೈಷ್ಣವಿ ಮಾತಾ ದಿ ದೇವಿಗೆ ಪೂಜಾ ಮಾಡಿ ಅಲ್ಲಿಂದ ಪಂಜಾಬ ರಸ್ತೆ ಮಾರ್ಗವಾಗಿ ಅಮ್ರಿತಸರ ರಸ್ತೆ ಯಲ್ಲಿ ಪೊಟೇಕ್ ಗ್ರಾಮದ ವರೆಗೆ ಮೊದಲನೇಯ ದಿನ ಒಟ್ಟು 225 ಕಿಲೋಮೀಟರ್ ಪ್ರಯಾಣಿಸಿದರು
ಮೊದಲನೇಯ ದಿನ ಪೊಟೇಕ್ ಗ್ರಾಮದಲ್ಲಿ ಸೈಕಲ್ ನ್ನು ನಿಲ್ಲಿಸಲಾಗಿದೆ.ಇಂದು ಮುಂಜಾನೆ ಪೊಟೇಕ್ ಗ್ರಾಮದಿಂದ ಇಂದು ಮತ್ತೆ ಯಾತ್ರೆ ಆರಂಭವಾಗಲಿದ್ದು ದಾರಿ ಉದ್ದಕ್ಕೂ ಡ್ರಗ್ಸ್ ಕುರಿತು ಜಾಗೃತಿ ಮೂಡಿಸಲಿದ್ದಾರೆ