ವಿಜಯನಗರ –
ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಹೋಮ್ ಗಾರ್ಡ್ಸ್ ಉಸ್ತುವಾರಿಯಾಗಿದ್ದ ಸಶಸ್ತ್ರ ಮೀಸಲು ಪೊಲೀಸ್ ಇನ್ಸ್ಪೆಕ್ಟರ್ ಪಿ.ಈಶ್ವರ ರಾವ್ (34) ಸೇವಾ ರಿವಾಲ್ವರ್ನಲ್ಲಿ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ವಿಜಯನಗರ ಜಿಲ್ಲೆಯಲ್ಲಿರುವ ಪೊಲೀಸ್ ಕ್ವಾಟ್ರರ್ಸ್ ನ ತಮ್ಮ ವಸತಿ ಗೃಹದಲ್ಲಿ ಘಟನೆ ನಡೆದಿದೆ. ಮನೆಯಲ್ಲಿದ್ದ ಈಶ್ವರ ರಾವ್ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡು ಫೈರಿಂಗ್ ಮಾಡಿಕೊಂಡಿದ್ದಾರೆ.
ಈ ವೇಳೆ ಅವರ ಪತ್ನಿ ಹರಿಪ್ರಿಯಾ ಮನೆಯಲ್ಲಿದ್ದರು. ಫೈರಿಂಗ್ ಶಬ್ದ ಕೇಳಿ ಆಘಾತಕ್ಕೆ ಒಳಗಾದ ಹರಿಪ್ರಿಯಾ, ಗಂಡನ ಸ್ಥಿತಿ ನೋಡಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.ಈಶ್ವರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿ ಸಿದಾದರೂ ಅಷ್ಟರಲ್ಲಾಗಲೇ ಈಶ್ವರ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ದೀಪಿಕಾ ಅವರು ಮಾಹಿತಿ ಪಡೆದು ಕೊಂಡಿದ್ದಾರೆ.ಈಶ್ವರ ರಾವ್ ಅವರು ಪೂರ್ವ ಗೋದಾವರಿ ಜಿಲ್ಲೆಯ ವೇದುರುಪಕ ಸವರಮ್ ಮೂಲದವರು. 2011 ರಲ್ಲಿ ಆರ್ಎಸ್ಐ ಆಗಿ ಪೊಲೀಸ್ ಇಲಾಖೆ ಸೇರಿದರು. 2020ರಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆದ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ನಾಲ್ಕು ವರ್ಷದ ಹಿಂದ ಷ್ಟೇ ಹರಿಪ್ರಿಯಾ ಎಂಬುವರನ್ನು ಮದುವೆಯಾಗಿದ್ದು ಸಧ್ಯ ಮೂರು ವರ್ಷದ ಹೆಣ್ಣು ಮಗಳಿದ್ದಾಳೆ.ಹರಿಪ್ರಿಯಾ ಪ್ರಸ್ತುತ 7 ತಿಂಗಳ ಗರ್ಭಿಣಿ.ವೈಯಕ್ತಿಕ ಕಾರಣಗಳಿಂದ ಈಶ್ವರ್ ರಾವ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಪ್ರಕರಣ ದಾಖಲಾಗಿದ್ದು ಸಾವಿಗೆ ನಿಖರವಾದ ಕಾರಣ ಪತ್ತೆಹಚ್ಚಲು ತನಿಖೆ ಆರಂಭವಾಗಿದೆ