ಹುಬ್ಬಳ್ಳಿ –
ಡಿಸೇಲ್ ಬದಲಿಗೆ 3462 ಚಿಗರಿ ಬಸ್ ಗೆ ಆಸಿಡ್ ಹಾಕಿದ್ರು ಇಂಜಿನ್ ಸೀಜ್ ಮಾಡಿದ್ರು – ಡಿಸೈಲ್ ಯಾವುದು ಆಸಿಡ್ ಯಾವುದು ಅಂತಾ ಗೊತ್ತಿಲ್ಲ ದವರಿದ್ದಾರೆ ಚಿಗರಿಯಲ್ಲಿ…..ತಪ್ಪಿತು ದೊಡ್ಡ ಅನಾಹುತ ಇದೇನಿದು DC ಯವರೇ
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ನಲ್ಲಿ ಒಂದಲ್ಲ ಒಂದು ಎಡವಟ್ಟುಗಳು ಕಂಡು ಬರುತ್ತಿವೆ.ಕಳೆದ ಐದಾರು ವರ್ಷಗಳಿಂದ ಅವಳಿ ನಗರದ ಮಧ್ಯೆ ಸಂಚಾರವನ್ನು ಮಾಡುತ್ತಿರುವ ಈ ಒಂದು ಬಸ್ ಗಳು ಸರಿಯಾದ ನಿರ್ವಹಣೆ ಮತ್ತು ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಇಂದು ಇವುಗಳು ಎಲ್ಲೇಂದರಲ್ಲಿ ನಿಂತುಕೊಳ್ಳುತ್ತಿರುವುದು ಒಂದೆಡೆ ಯಾದರೆ ಇನ್ನೂ ಇತ್ತೀಚಿಗಷ್ಟೇ ಇಲಾಖೆಗೆ ಡಿಸಿಯಾಗಿ ಬಂದಿರುವ ಸಿದ್ದಲಿಂಗಯ್ಯ ಅವರ ಕಾರ್ಯವೈಖರಿ ಚಾಲಕರಿಗೆ ಕಿರಿಕಿರಿಯಾಗುತ್ತಿದೆ.
ಬಸ್ ಗಳನ್ನು ಮೊದಲು ಸರಿಯಾಗಿ ಸುಧಾರಣೆ ಮಾಡಬೇಕಾದ ಡಿಸಿಯವರು ಅದನ್ನು ಬಿಟ್ಟು ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾರೆ ಹೀಗಾಗಿ ಒಂದು ಕಡೆಗೆ ಹಾಳಾದ ಬಸ್ ಗಳು ಇನ್ನೊಂದೆಡೆ ಇಲಾಖೆಯಲ್ಲಿ ಏನು ನಡೆಯುತ್ತಿದೆ ಏನಾಗುತ್ತಿದೆ ಎಂಬೊದಕ್ಕೆ ಡಿಸೇಲ್ ಬದಲಿಗೆ ಆಸಿಡ್ ಹಾಕಿದ ಘಟನೆಯೇ ಸಾಕ್ಷಿಯಾಗಿದೆ.
ಕಳೆದ ಹಲವು ದಿನಗಳಿಂದ ಹುಬ್ಬಳ್ಳಿ ಧಾರವಾಡ ಚಿಗರಿ ಡಿಪೋ ದಲ್ಲಿ ಡಿಸೈಲ್ ಸಮಸ್ಯೆಯಾಗಿದ್ದು ಹೀಗಾಗಿ ಬಸ್ ಗಳಿಗೆ ತೊಂದರೆ ಯಾಗಿದ್ದ ಹೀಗೆ ಡಿಸೈಲ್ ಖಾಲಿಯಾಗಿ ಬಸ್ ವೊಂದು ದಾರಿ ಮಧ್ಯದಲ್ಲಿಯೇ ನಿಂತುಕೊಂಡಿದ್ದು ಇದನ್ನು ಅರಿತ ಅಧಿಕಾರಿಗಳು ಇಲಾಖೆಯ ವಾಹನದಲ್ಲಿ ಡಿಸೇಲ್ ತಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ
ಡಿಸೇಲ್ ತಗೆದುಕೊಂಡು ಹೋಗಿ ಅಂದರೆ ಶೌಚಾಲ ಯಕ್ಕೆ ಉಪಯೋಗ ಮಾಡುವ ಆಸಿಡ್ ನ್ನು ತಗೆದು ಕೊಂಡು ಹೋಗಿ ಬಸ್ ಗೆ ಹಾಕಿದ್ದಾರೆ ಸ್ವಲ್ಪ ದೂರ ಬಸ್ ಹೋಗುತ್ತಿದ್ದಂತೆ ಬಸ್ ನ ಇಂಜಿನ್ ಸಂಪೂರ್ಣವಾಗಿ ಹಾಳಾಗಿ ಸೀಜ್ ಆಗಿದೆ ಟ್ಯಾಂಕ್ ನಲ್ಲಿ ಉಳಿದುಕೊಂ ಡಿದ್ದ ಅಲ್ಪ ಸ್ವಲ್ಪ ಡಿಸೇಲ್ ನೊಂದಿಗೆ ಆಸಿಡ್ ಕೂಡಿ ಕೊಂಡು ಬ್ಲಾಸ್ಟ್ ಆಗುವ ಅನಾಹುತ ತಪ್ಪಿದಂತಾಗಿದ್ದು
ಡಿಸೇಲ್ ಯಾವುದು ಆಸಿಡ್ ಯಾವುದು ಗೊತ್ತಿಲ್ಲದ ಸಿಬ್ಬಂದಿಗಳು ಇಲಾಖೆಯಲ್ಲಿ ಇದ್ದಾರೆ ಎಂದರೆ ಇದು ಡಿಸಿಯವರ ಕಾರ್ಯವೈಖರಿಯನ್ನು ತೋರಿಸುತ್ತದೆ ಸಧ್ಯ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದ್ದು ಬಸ್ ಸಧ್ಯ ಸಂಪೂರ್ಣವಾಗಿ ಕ್ಲೀನ್ ಆಗಿ ಸಂಚಾರವನ್ನು ಮಾಡುತ್ತಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..