ಚಾಮರಾಜನಗರ –
ಕೋವಿಡ್ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ವಿಕೇಂಡ್ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ವನ್ನು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.ಚಾಮರಾಜನಗರ ಜಿಲ್ಲೆ ಯಲ್ಲೂ ಈ ಒಂದು ಕರ್ಫ್ಯೂ ವನ್ನು ಘೋಷಣೆಯ ಆದೇಶ ಅನ್ವಯವಾಗಲಿದ್ದು ಅತ್ತ ರಾಜ್ಯ ಸರ್ಕಾ ರಿಂದ ಈ ಒಂದು ಆದೇಶ ಬರುತ್ತಿದ್ದಂತೆ ಇತ್ತ ಚಾಮರಾಜನಗರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ವಾರದ ವಿಕೇಂಡ್ ಕರ್ಫ್ಯೂ ದಿಂದಾಗಿ ಜಿಲ್ಲೆಯ ಶಿಕ್ಷಕರಿಗೆ ಮನೆಯಿಂದಲೇ ಕೆಲಸಕ್ಕೆ ಅವ ಕಾಶವನ್ನು ನೀಡಿ ಆದೇಶವನ್ನು ಹೊರಡಿಸಿದ್ದಾರೆ.

ಹೌದು ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ಜಿಲ್ಲೆಯಲ್ಲಿನ ಶಿಕ್ಷಕರು ಮನೆಯಿಂದಲೇ ಕೆಲಸ ವನ್ನು ಮಾಡುವಂತೆ ಸೂಚನೆ ನೀಡಿ ಆದೇಶವನ್ನು ಹೊರಡಿಸಿದ್ದಾರೆ.ಇದರೊಂದಿಗೆ ಈಒಂದು ಕರ್ಪ್ಯೂ ಸಮಯದಲ್ಲಿ ಶಿಕ್ಷಕರಿಗೆ ಯಾವುದೇ ತೊಂದರೆಯಾ ಗದಂತೆ ಮುಂಜಾಗೃತಾ ಕ್ರಮವನ್ನು ಕೈಗೊಂಡಿದ್ದಾರೆ.