ಗುವಾಹಟಿ –
ಅಂತರರಾಷ್ಟ್ರೀಯ ಅಥ್ಲೀಟ್ ಹಿಮಾದಾಸ್ ಅವರು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರು ನೇಮಕಾತಿ ಆದೇಶ ಪತ್ರವನ್ನು ಹಿಮಾ ದಾಸ್ ಅವರಿಗೆ ಪ್ರಧಾನ ಮಾಡಿದರು.
ಹಿಮಾ ದಾಸ್ ಅಧಿಕಾರ ಸ್ವೀಕರಿಸಿದ ವೇಳೆ ಅಸ್ಸಾಂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.ಇದನ್ನು ಇವರು ತಮ್ಮ ಖಾತೆಯ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅಸ್ಸಾಂ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದು, ಇದರೊಂದಿಗೆ ನನ್ನ ಬಾಲ್ಯದ ಕನಸು ನನಸಾಗಿದೆ ಎಂದು ಹಿಮಾ ದಾಸ್ ಹೇಳಿದ್ದಾರೆ.ಇನ್ನೂ ಇವರ ಸಾಧನೆ ಕುರಿತು ನೋಡೊದಾದರೆ ಹಿಮ ದಾಸ್ IAAF ವರ್ಲ್ಡ್ U20 ಚಾಂಪಿಯನ್ ಶಿಪ್ ನಲ್ಲಿ 51.46 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗಳಿಸಿದ್ದಾರೆ.
2019 ರಲ್ಲಿ ಹಿಮದಾಸ್ ಒಟ್ಟು 5 ಚಿನ್ನದ ಪದಕಗಳಗನ್ನ ಬಾಚಿಕೊಂಡರು. 400 ಮೀ. ಗುರಿಯನ್ನ 52.09 ಸೆಕೆಂಡ್ ಗಳಲ್ಲಿ ಓಡಿದ ಕೀರ್ತಿ ಹಿಮ ದಾಸ್ ಅವರದ್ದು. ಹಿಮ ದಾಸ್ ಅವರನ್ನು ಧಿಂಗ್ ಎಕ್ಸ್ ಪ್ರೆಸ್ ಅಂತಲೂ ಕರೆಯಲಾಗುತ್ತದೆ.