ಬೆಂಗಳೂರು –
ಮಹಾ ಸಮ್ಮೇಳನಕ್ಕೆ ಶಿಕ್ಷಣ ಸಚಿವರಿಗೆ ಆಮಂತ್ರಣ – ಷಡಾಕ್ಷರಿ ಅವರ ನೇತ್ರತ್ವದಲ್ಲಿ ಸಚಿವರಿಗೆ ಆಮಂತ್ರಣ ನೀಡಿದ ರಾಜ್ಯ ಸರ್ಕಾರಿ ನೌಕರರ ಟೀಮ್ ಹೌದು
ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಕಾರ್ಯ ಕ್ರಮ ನಡೆಯಲಿದೆ.ಈ ಒಂದು ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗ ಳು ನಡೆದಿದ್ದು ಈ ನಡುವೆ ಸಮಾರಂಭಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಆಮಂತ್ರಣ ವನ್ನು ನೀಡಲಾಯಿತು.ಹೌದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತ್ರತ್ವದಲ್ಲಿನ ತೆರಳಿದ ನಿಯೋಗವು ಸಚಿವರಿಗೆ ಸಮ್ಮೇಳನಕ್ಕೆ ಬರುವಂತೆ ಅಧಿಕೃತವಾಗಿ ಆಮಂತ್ರಣವನ್ನು ನೀಡಲಾಯಿತು.
ನೌಕರರ ಸಮ್ಮೇಳನದಲ್ಲಿ ಶಿಕ್ಷಣ ಸಚಿವರು ಪಾಲ್ಗೊಳ್ಳುವಂತೆ ಈ ಒಂದು ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಮಂತ್ರಿಸಲಾಯಿತು.ರಾಜ್ಯ ಸರ್ಕಾರಿ ನೌಕರರ ಮಹಾಸಮ್ಮೇಳನದಲ್ಲಿ ಭಾಗವಹಿಸುವಂತೆ ಮಧು ಬಂಗಾರಪ್ಪನವರಿಗೆ ಷಡಾಕ್ಷರಿಯವರು ಆಹ್ವಾನ ನೀಡಿದರು. ಸಮ್ಮೇಳ ನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಶುಭ ಕೋರು ವಂತೆ ಮನವಿ ಮಾಡಲಾಯಿತು.ಈ ಸಂದರ್ಭ ದಲ್ಲಿ ಸಚಿವರು ಮಾತನಾಡಿ ಸಮ್ಮೇಳನದಲ್ಲಿ ರಾಜ್ಯದ ಶಿಕ್ಷಕರು ಭಾಗವಹಿಸುತ್ತಿರುವುದು ಸಂತಸದ ವಿಷಯವಾಗಿದ್ದು ಈ ಸಮ್ಮೇಳನದಲ್ಲಿ ಭಾಗವಹಿಸುತ್ತೇನೆಂದು ಸಂತೋಷದಿಂದ ತಿಳಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..