ನವದೆಹಲಿ –
ನಿನ್ನೆಯಷ್ಟೇ ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿ ತಗೆದುಕೊಂಡ ಎಡಿಜಿಪಿ ಭಾಸ್ಕರ್ ರಾವ್ ಅವರು ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹೌದು ಈ ಹಿಂದೆಯೇ ಅವರು ಆಪ್ ಪಕ್ಷಕ್ಕೆ ಸೇರುವ ಗುಮಾನಿಗಳು ಕೇಳಿಬಂದಿದ್ದವು.ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಎಎಪಿ ಕಚೇರಿಯಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಭಾಸ್ಕರ್ ರಾವ್ ಅವರು ಆಪ್ ಸೇರ್ಪಡೆಯಾದರು.
ಭಾಸ್ಕರ್ ರಾವ್ ಅವರು ಭಾನುವಾರ ಪೊಲೀಸ್ ವೃತ್ತಿ ಯಿಂದ ಸ್ವಯಂ ನಿವೃತ್ತರಾಗಿದ್ದರು.ರೈಲ್ವೆ ಪೊಲೀಸ್ ಎಡಿಜಿಪಿ ಹುದ್ದೆಗೆ ಸ್ವಯಂ ನಿವೃತ್ತಿ ಕೋರಿ ಸೆಪ್ಟೆಂಬರ್ 2021ರಲ್ಲಿ ಭಾಸ್ಕರ್ ರಾವ್ ರಾಜೀನಾಮೆ ಸಲ್ಲಿಸಿದ್ದರು. ನಿರ್ಧಾರ ಪುನರ್ ಪರಿಶೀಲನೆಗೆ ಕೇಂದ್ರ ಗೃಹ ಸಚಿವಾ ಲಯ ಅವಕಾಶ ನೀಡಿತ್ತು. ಆದರೆ ತಮ್ಮ ನಿರ್ಧಾರದಿಂದ ಭಾಸ್ಕರ್ ರಾವ್ ಹಿಂದೆ ಸರಿದಿರಲಿಲ್ಲ.ಹೀಗಾಗಿ ಇದೆಲ್ಲದರ ನಡುವೆ ಇಂದು ಎಎಪಿ ಪಕ್ಷ ಸೇರ್ಪಡೆಯಾಗಿದ್ದು ಮುಂದೇ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.