ಬೆಂಗಳೂರು –
ಪತಿ ಸೇರಿದಂತೆ ಅವರ ಕುಟುಂಬದ ಮೇಲೆ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು ಮಾಡಿದ್ದ ವರದಕ್ಷಿಣೆ ಕಿರುಕುಳ ಆರೋಪವನ್ನು ಐಎಫ್‌ಎಸ್ (ವಿದೇಶಾಂಗ) ಅಧಿಕಾರಿ ನಿತಿನ್ ಸುಭಾಷ್ ಅವರು ನಿರಾಕರಿಸಿದ್ದಾರೆ.

ರಾಜ್ಯ ಕೆಎಸ್‌ಆರ್ ಪಿ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ವರ್ತಿಕಾ ಕಟಿಯಾರ್ ಅವರು, ತಮ್ಮ ಪತಿ ನಿತಿನ್ ಸುಭಾಷ್ ಯೋಲಾ ಮತ್ತು ಅವರ ಕುಟುಂಬದ ಒಟ್ಟು ಏಳು ಜನರ ವಿರುದ್ಧ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿ ಸಿದ್ದರು ಅಲ್ಲದೇ ದೂರನ್ನು ನೀಡಿ ದಾಖಲು ಮಾಡಿದ್ದರು

ಆರೋಪ ಸಂಬಂಧ ಪೊಲೀಸರ ಬಳಿ ಹೇಳಿಕೆ ದಾಖಲಿಸಿರುವ ನಿತಿನ್ ಸುಭಾಷ್ ಯೋಲಾ ಅವರು ಐಪಿಎಸ್ ಅಧಿಕಾರಿಯಾಗಿ ಪತ್ನಿ ವರ್ತಿಕಾ ಅವರು ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2019ರ ಏಪ್ರಿಲ್ ತಿಂಗಳಿನಲ್ಲೇ ಪತ್ನಿ ವರ್ತಿಕಾ ನನ್ನಿಂದ ದೂರಾಗಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿ ದ್ದಾರೆ ಅಲ್ಲದೇ 2019ರ ಏಪ್ರಿಲ್ ತಿಂಗಳಿನಿಂದಲೂ ನಾವಿಬ್ಬರೂ ಭೇಟಿಯಾಗಿಲ್ಲ. ಇನ್ನೂ ನಾನು ಹಾಗೂ ನನ್ನ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದೇವೆಂಬ ಆರೋಪ ಸತ್ಯಕ್ಕೆ ದೂರವಾದ ದ್ದು ಎಂದು ಹೇಳಿದ್ದಾರೆ.

ದೂರಿನಲ್ಲಿ ದೂರುದಾರರು ತಮಗೆ ಹಿಂಸೆ ನೀಡಿರುವ ಮನೆಯ ವಿಳಾಸವನ್ನು ನೀಡಿದ್ದಾರೆ. ಈ ವಿಳಾಸದಲ್ಲಿರುವ ಮನೆಯನ್ನು 2019ರ ಜೂನ್ ನಲ್ಲಿ ಮಂಜೂರು ಮಾಡಲಾಗಿತ್ತು. ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೆವು. ಮದುವೆ ವೇಳೆಯೂ ವರದಕ್ಷಿಣೆಗೆ ಬೇಡಿಕೆ ಇಟ್ಟಿರಲಿಲ್ಲ. ಪಡೆದೂ ಇಲ್ಲ. ಇನ್ನೂ ನಾನೇ ಪತ್ನಿಗೆ 5 ಲಕ್ಷ ರೂ.ಗಳ ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದೇನೆ. ಆದರೂ ಕಟಿಯಾರ್’ಗೆ ಆಭರಣಗಳ ದುರಾಸೆ ಮಾತ್ರ ನಿಂತಿರಲಿಲ್ಲ. ಸ್ಟೇಟಸ್’ಗೆ ಸೂಟ್ ಆಗಬೇಕೆಂ ದು ಯಾವಾಗಲೂ ದುಬಾರಿ ಬೆಲೆಯ ಆಭರಣ ಬೇಕೆಂದು ಬಯಸುತ್ತಿದ್ದಳು. ಬಹಳ ಹಠ ಮಾಡುತ್ತಿದ್ದ ಕಾರಣ ಶ್ರೀಲಂಕಾದಿಂದ ರೂ.1 ಲಕ್ಷ ಮೌಲ್ಯದ ನೀಲಮಣಿ ಉಂಗುರವನ್ನು ಉಡುಗೊರೆ ಯಾಗಿ ನೀಡಿದ್ದೆ. ಆದರೆ. ಇದನ್ನು ಆಕೆ ತನ್ನ ಸ್ಟೇಟಸ್ ಗಿಂತ ಕೆಳಮಟ್ಟದ್ದು ಎಂದು ಹೇಳಿದ್ದಳು. ರಾಣಿ ಎಲಿಜಬೆತ್ ಧರಿಸಿರುವ ನೀಲಮಣಿ ಗಾತ್ರದ ಉಂಗುರವನ್ನು ಆಕೆ ಬಯಸಿದ್ದಳು.ಈ ವೇಳೆ ನಾನು ನನ್ನಿಂದ ಸಾಧ್ಯವಾದಷ್ಟು ಮಾತ್ರವೇ ಉಡುಗೊರೆ ನೀಡಲು ಸಾಧ್ಯ ಎಂದಿದ್ದೆ. ಸಾಕಷ್ಟು ಗೋಗರೆದ ಬಳಿಕ 3-4 ತಿಂಗಳುಗಳ ಬಳಿಕ ಉಡುಗೊರೆಯನ್ನು ತೆಗೆದುಕೊಂಡಿದ್ದಳು.

2016ರಲ್ಲಿ ಕೊಲಂಬೋದಲ್ಲಿ ಕೈ ಮೂಳೆ ಮುರಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಅದು ನಾನು ಮಾಡಿದ್ದಲ್ಲ. ಪ್ರವಾಸದ ಸಂದರ್ಭ ದಲ್ಲಿ ಸಾಗಾಣೆ ಪೆಟ್ಟಿಗೆಯೊಂದು ತಗುಲಿ ಕೈ ಮೂಳೆ ಮುರಿದಿತ್ತು. ಆಕೆ ಯಾವಾಗಲೂ ತನ್ನ ಕೋಪವನ್ನು ಮನೆಗಳಲ್ಲಿನ ವಸ್ತುಗಳ ಮೇಲೆ ಬಿಡುತ್ತಿದ್ದಳು. ಈ ವೇಳೆ ಗಾಯ ಮಾಡಿಕೊಳ್ಳುತ್ತಿದ್ದಳು.

ಇನ್ನೂ ಕೋಪ ತಣ್ಣಗಾದ ಬಳಿಕ ನಾನೇ ಆಸ್ಪತ್ರೆಗೆ ಕರೆದೊಯ್ಯು ತ್ತಿದ್ದೆ. ಈ ವಿಚಾರ ಪೋಷಕರು ಹಾಗೂ ಆಪ್ತರಿಗೂ ತಿಳಿದಿದೆ. ಆಕೆಯ ವರ್ತನೆ ನನಗೂ ಹಾಗೂ ಪುತ್ರನಿಗೂ ಸಾಕಷ್ಟು ಆಘಾತವನ್ನೂ ತಂದಿತ್ತು ಎಂದು ಸುಭಾಷ್ ಅವರು ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಪತ್ನಿಯ ಜೊತೆಗಿನ ಸಂದೇಶ ರವಾನೆ ಹಾಗೂ ಹಣಕಾಸು ರವಾನೆ ಕುರಿತ ಮಾಹಿತಿಯನ್ನೂ ಸುಭಾಷ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.