ಬೆಂಗಳೂರು –
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪೆಕ್ಟರ್ ನೇಮಕಾತಿ ಅಕ್ರಮ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮದ ಬಳಿಕ ಈಗ ಕೆ ಪಿಎಸ್ ಸಿ ಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾ ಗಿದೆ.ಹೌದು ಮೊರಾರ್ಜಿ ದೇಸಾಯಿ ಶಾಲಾ ಶಿಕ್ಷಕರ ನೇಮ ಕಾತಿಯ ವೇಳೆಯಲ್ಲೂ ಅಕ್ರಮ ನಡೆದಿದೆ ಎಂದು ಆರೋ ಪಿಸಲಾಗಿದೆ.ನಾಲ್ಕು ವರ್ಷದ ಹಿಂದೆ ನಡೆದಿದ್ದ ಅಕ್ರಮ ಈಗ ಬೆಳಕಿಗೆ ಬಂದಿದೆ.ಇದರ ತನಿಖೆಗೆ ಆದೇಶವನ್ನೂ ನೀಡಲಾಗಿದೆ.ಮೊರಾರ್ಜಿ ದೇಸಾಯಿ ಶಿಕ್ಷಕರ ನೇಮಕಾತಿ ಯಲ್ಲಿ ಬಹುದೊಡ್ಡ ಅಕ್ರಮ ನಡೆದಿದ್ದು ಈಗ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.
ಕೆ ಪಿಎಸ್ ಸಿ ವತಿಯಿಂದ ಈ ಪರೀಕ್ಷೆ ನಡೆಸಲಾಗಿತ್ತು ದಾವಣಗೆರೆ ಜಿಲ್ಲೆಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅಕ್ರಮ ಎಸಗಲಾಗಿತ್ತು.ಪರೀಕ್ಷಾ ಕೇಂದ್ರದಲ್ಲಿ ರೆಡ್ ಹ್ಯಾಂಡ್ ಆಗಿ ತಿಪ್ಪೇಶ್ ನಾಯ್ಕ್ ಸಿಕ್ಕಿಬಿದ್ದಿದ್ದರು ಪ್ರದೀಪ್ ನಾಯ್ಕ್ ಹಾಗೂ ಕೃಷ್ಣಾ ನಾಯ್ಕ್ ಅಕ್ರಮಕ್ಕೆ ಸಹಾಯ ಮಾಡಿದ್ದ ರಂತೆ ಸಧ್ಯ ಈ ಒಂದು ವಿಚಾರ ಕುರಿತು ತನಿಖೆ ಗೆ ಸೂಚನೆ ನೀಡಲಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.