ಹಿರಿಯೂರು –
ಬಿಸಿಯೂಟ ಯೋಜನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು.ಹಾಗೆ ಬಿಸಿಯೂಟ ತಯಾ ರಿಸುವ ನೌಕರರಿಗೆ ಕನಿಷ್ಠ ₹ 24 ಸಾವಿರ ವೇತನ ನಿಗದಿಪ ಡಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.ಕೇಂದ್ರ ಸರ್ಕಾರ ಕಡಿತಗೊಳಿಸಿರುವ ಶೇ 40ರಷ್ಟು ಅನುದಾನವನ್ನು ಮೊದಲಿನಂತೆ ಹೆಚ್ಚಿಸಬೇಕು.ದೇಶದಲ್ಲಿನ ಸಂಘಟಿತ ಅಸಂಘಟಿತ,ಗುತ್ತಿಗೆ ಕಾರ್ಮಿಕರು,ಕೇಂದ್ರ-ರಾಜ್ಯ ಸೇವೆಯ ನ್ನೊಳಗೊಂಡಂತೆ ಸಾರ್ವಜನಿಕ ಕೈಗಾರಿಕೆಗಳು,ಸಾರಿಗೆ ರಂಗದ ಎಲ್ಲಾ ನೌಕರರನ್ನು ಕೆಲಸಗಾರರು ಎಂದು ಪರಿಗ ಣಿಸಿ ಶಾಸನಬದ್ಧ ಸವಲತ್ತು ನೀಡಬೇಕು ಎಂದು ಪ್ರತಿಭಟ ನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಡಿ.ಎಂ. ಮಲಿಯಪ್ಪ,ಅಧ್ಯಕ್ಷೆ ನಿಂಗಮ್ಮ,ಕಾರ್ಯದರ್ಶಿ ರಾಜಮ್ಮ, ಗಿರಿಜಮ್ಮ ಇದ್ದರು.ಗಾಂಧಿವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿದ ಪ್ರತಿಭಟನಕಾರರು.ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.