ಬಸವರಾಜ ಕೊರವರ ಭೇಟಿಯಾಗಿ ಆರೋಗ್ಯ ವಿಚಾರಣೆ ಮಾಡಿದ ತವನಪ್ಪ ಅಷ್ಟಗಿ ಸಮಸ್ಯೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಚರ್ಚೆ ಮಾಡೊದಾಗಿ ಭರವಸೆ ನೀಡಿದ ತವನಪ್ಪ ಅಷ್ಟಗಿ

Suddi Sante Desk
ಬಸವರಾಜ ಕೊರವರ ಭೇಟಿಯಾಗಿ ಆರೋಗ್ಯ ವಿಚಾರಣೆ ಮಾಡಿದ ತವನಪ್ಪ ಅಷ್ಟಗಿ ಸಮಸ್ಯೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಚರ್ಚೆ ಮಾಡೊದಾಗಿ ಭರವಸೆ ನೀಡಿದ ತವನಪ್ಪ ಅಷ್ಟಗಿ

ಧಾರವಾಡ

ನೀರು ಸರಬರಾಜು ಮಾಡುವ ಗುತ್ತಿಗೆ ಕಾರ್ಮಿಕರ ಬಾಕಿ ವೇತನ ನೀಡಬೇಕು ಹಾಗೂ ನೀರು ಸರಬರಾಜು ಮಹಾನಗರ ಪಾಲಿಕೆಯ ಗುತ್ತಿಗೆ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರು ಕಳೆದ 3 ದಿನಗಳಿಂದ ಅಮರಣ ಉಪವಾಸ ಸತ್ಯಾಗ್ರಹವನ್ನು ಧಾರವಾಡ ದಲ್ಲಿ ಮಾಡುತ್ತಿದ್ದು ಅಸ್ವಸ್ಥಗೊಂಡಿದ್ದ ಇವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹೀಗಾಗಿ ಇವರನ್ನು ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ತವನಪ್ಪ ಅಷ್ಟಗಿ ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿ ಕೆಲವೊಂಂದಿಷ್ಟು ವಿಚಾರ ಗಳ ಕುರಿತು ಚರ್ಚೆ ಯನ್ನು ಮಾಡಿದರು ಈ ಸಂದರ್ಭದಲ್ಲಿ ಕೇಂದ್ರದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚಿಸಿರುವುದಾಗಿ ಹಾಗೂ ಕೇಂದ್ರ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಮಹಾನಗರ ಪಾಲಿಕೆಯ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು

ಇದೇ ವೇಳೆ ಅಮರಣ ಉಪವಾಸ ಸತ್ಯಾಗ್ರಹ ವನ್ನು ಕೈ ಬಿಡುವಂತೆ ಬಸವರಾಜ ಕೊರವರ ಅವರನ್ನು ತವನಪ್ಪ ಅಷ್ಟಗಿ ಅವರು  ಮನವೊ ಲಿಸಿ ಹೇಳಿದರು.

 

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.