This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

8ನೇ ತರಗತಿಯ ವಿದ್ಯಾರ್ಥಿಗಳಿಗೆ ದೊಡ್ಡ ಶಾಕ್ ನೀಡಿದ ರಾಜ್ಯ ಸರ್ಕಾರ – ಕರೋನ ಕಾರಣದಿಂದ ಈ ಬಾರಿ ಸಿಗುವುದು ಅನುಮಾನವಂತೆ…..

WhatsApp Group Join Now
Telegram Group Join Now

ಬೆಂಗಳೂರು –

ಕೊರೊನಾ ಕಾರಣದಿಂದ ರಾಜ್ಯದ ಸರ್ಕಾರಿ,ಅನುದಾನಿತ ಶಾಲೆಗಳ 8 ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿಯೂ ಸೈಕಲ್ ಸಿಗುವುದು ಅನುಮಾನ.ಕಳೆದ ವರ್ಷ ಕೂಡ ಕೊರೊನಾ ಲಾಕ್ ಡೌನ್ ಹಿನ್ನೆಯಲ್ಲೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಸಾಧ್ಯವಾಗಿರಲಿಲ್ಲ.ಈ ಬಾರಿಯೂ ಕೊರೊನಾ ಸೋಂಕಿನಿಂದಾಗಿ ಆರ್ಥಿಕತೆ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಪರಿಣಾಮ ಬೀರಿದ್ದು ಈ ವರ್ಷವೂ 8ನೇ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಬೈಸಿಕಲ್ ಯೋಜನೆ ಮುಂದುವರೆಸುವುದು ಅನುಮಾನವಾಗಿದೆ.

2019-20 ನೇ ಸಾಲಿನಲ್ಲಿ ರಾಜ್ಯದಲ್ಲಿ 2,44,901 ಬಾಲಕಿ ಯರು ಹಾಗೂ 2,59,624 ಬಾಲಕರಿಗೆ ಸೈಕಲ್ ವಿತರಣೆ ಮಾಡಲಾಗಿತ್ತು ಅದರರಂತೆ ಕಳೆದ ವರ್ಷವೂ ಕೂಡ 5 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ಅಂದಾಜು ಇತ್ತು ಆದರೆ ಕೊರೊನಾ ಲಾಕ್ ಡೌನ್ ಅನುದಾನದ ಕೊರತೆ ಕಾರಣಗಳಿಂದಾಗಿ ಸೈಕಲ್ ವಿತರಣೆ ಕೈಬಿಡಲಾಗಿತ್ತು.

2021-22ನೇ ಶೈಕ್ಷಣಿಕ ಸಾಲಿನ 8ನೇ ತರಗತಿ ವಿದ್ಯಾರ್ಥಿ ಗಳಿಗೆ ಸೈಕಲ್ ವಿತರಣೆ ಆಗುವುದು ಕಷ್ಟ. ಬಜೆಟ್‍ ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಟ್ಟಿಲ್ಲ ಹೀಗಾಗಿ, ವಿದ್ಯಾರ್ಥಿ ಗಳಿಗೆ ಸೈಕಲ್ ಸಿಗುವುದು ಅನುಮಾನವಾಗಿದೆ

ಸರ್ಕಾರ ಅನುದಾನ ಕೊಟ್ಟರೆ ಮಾತ್ರ ಈ ಶೈಕ್ಷಣಿಕ ವರ್ಷಕ್ಕೆ ಉಚಿತ ಬೈಸಿಕಲ್ ವಿತರಣೆ ಮಾಡಲಾಗುತ್ತದೆ ಎಂಬ ಮಾತುಗಳು ಇಲಾಖೆಯಲ್ಲಿ ಕೇಳಿ ಬರುತ್ತಿದ್ದು ಏನೇನಾ ಗುತ್ತದೆ ಎಂಬುದನ್ನು ಕಾದು ನೋಡಬೇಕು

ವರದಿ – ವೆಂಕಟೇಶ್ ಜೊತೆಗೆ ಗೋಪ್ಯಾ ಸುದ್ದಿ ಸಂತೆ ಡೆಸ್ಕ್


Google News

 

 

WhatsApp Group Join Now
Telegram Group Join Now
Suddi Sante Desk